ಮಂಜೇಶ್ವರ : ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂರನೇ ವಾರ್ಷಿಕ 'ಶತಾಬ್ದಿ ಸಂಭ್ರಮ'ದ ಸಮಾರೋಪ ಸಮಾರಂಭ ಬುಧವಾರ ಜರಗಿತು.
ಬೆಳಿಗ್ಗೆ ಹಳೆ ವಿದ್ಯಾರ್ಥಿಗಳಿಗೆ ಹಾಗೂ ಊರವರಿಗೆ ಕ್ರೀಡಾಕೂಟ ನಡೆಯಿತು. ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ ವಹಿಸಿದ್ದರು.
ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಮಾತನಾಡಿ 'ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ಭದ್ರವಾದ ಅಡಿಪಾಯವನ್ನು ಹಾಕಿ, ಎಲ್ಲರಲ್ಲೊಂದಾಗಿ ಬಾಳುವ, ಬದುಕುವ ಸಂಸ್ಕಾರವನ್ನು ಕಲಿಸಿ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಕುಳೂರಿನಂತಹ ಸರಕಾರಿ ಶಾಲೆಗಳೂ ಪ್ರಮುಖ ಪಾತ್ರ ವಹಿಸುತ್ತವೆ' ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಎಸ್.ಎನ್.ಎಲ್. ನ ನಿವೃತ್ತ ಸಹಾಯಕ ಪ್ರಧಾನ ಪ್ರಬಂಧಕ ನಾರಾಯಣ ಕಲ್ಯಾಣತ್ತಾಯ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಮೀಂಜ ಪಿ.ಇ.ಸಿ. ಕಾರ್ಯದರ್ಶಿ ಹಾಗೂ ಮಜಿಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಬಂಗೇರ ಕೆ, ಮೀಯಪದವು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಜಾರಾಮ ರಾವ್ ಟಿ, ವಿದ್ಯಾವರ್ಧಕ ಎ.ಯು.ಪಿ. ಶಾಲೆಯ ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ, ಶತಮಾನೋತ್ಸವ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ಸತ್ಯನಾರಾಯಣ ಶರ್ಮ, ಮಂಜೇಶ್ವರ ಲೈಬ್ರರಿ ಕೌನ್ಸಿಲ್ ನ ಕಾರ್ಯದರ್ಶಿ ಕಮಲಾಕ್ಷ ಡಿ, ಉದ್ಯಮಿ ಸೀತಾರಾಮ ಶೆಟ್ಟಿ ಮಾಣೂರು, ಎಕ್ಸ್ಪರ್ಟ್ ಕಾಲೇಜು ಮಂಗಳೂರು ಇದರ ಪ್ರಾಧ್ಯಾಪಕ ಬಾಲಕೃಷ್ಣ ಶೆಟ್ಟಿ ಎಲಿಯಾಣ, ಎಲ್.ಐ.ಸಿ. ಆಫ್ ಇಂಡಿಯಾದ ನಿವೃತ್ತ ಪ್ರಧಾನ ಪ್ರಬಂಧಕ ಸದಾಶಿವ ಶೆಟ್ಟಿ ಎಲಿಯಾಣ, ಯುವ ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರ್, ಸಾಹಿತಿ ಕೆ.ಎ.ಎಂ. ಅನ್ಸಾರಿ, ಉದ್ಯಮಿ ಗೋಪಾಲಕೃಷ್ಣ ಶೆಟ್ಟಿ ಮೀಯಪದವು ಗುತ್ತು, ಕತಾರ್ ನ ಅಲ್ಮನ ಗ್ರೂಪ್ ಆಫ್ ಕಂಪನಿಯ ಆರ್ಥಿಕ ವಿಭಾಗ ಪ್ರಬಂಧಕ ಸಿ.ಎ. ಮನೋಜ್ ಶೆಟ್ಟಿ ಚಾರ್ಲ, ಯುಕೆ. ಯ ಹೆರಿಯಟ್ ವ್ಯಾಟ್ ವಿಶ್ವವಿದ್ಯಾಲಯದ ಡಾಕ್ಟರಲ್ ರಿಸರ್ಚ್ ಅಸೋಸಿಯೇಟ್ ಡಾ. ಅಕ್ಷಯ್ ಕುಮಾರ್ ಎಲಿಯಾಣ, ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿ ಜಗನ್ನಾಥ ಶೆಟ್ಟಿ ಕರಿಪ್ಪಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಲವಾನಂದ ಎಲಿಯಾಣರವರ ಚೊಚ್ಚಲ ಕೃತಿ 'ನಗೆಮಲ್ಲಿಗೆ' ಲಲಿತ ಪ್ರಬಂಧವನ್ನು ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿರವರು ಬಿಡುಗಡೆಗೊಳಿಸಿದರು.
ಶಾಲಾ ಹಳೆ ವಿದ್ಯಾರ್ಥಿ ಮನೋಜ್ ಶೆಟ್ಟಿ ಚಾರ್ಲ ಹಾಗೂ ಡಾ. ಅಕ್ಷಯ್ ಕುಮಾರ್ ಎಲಿಯಾಣರವರಿಗೆ ಶತಮಾನೋತ್ಸವ ಸಮಿತಿಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. 2023-24 ನೇ ಸಾಲಿನ ಎಲ್.ಎಸ್.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿ ತಂದ ಕುಮಾರಿ ತನ್ವಿ ಎಸ್. ಪೂಜಾರಿ ಯವಳನ್ನು ಶತಮಾನೋತ್ಸವ ಸಮಿತಿಯ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಜೊತೆಗೆ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದ, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಪದಾಧಿಕಾರಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶತಮಾನೋತ್ಸವ ಪ್ರಯುಕ್ತ ನಡೆಸಿದ ಶಾಲಾ ಮಕ್ಕಳ ಕ್ರೀಡಾಕೂಟ ಹಾಗೂ ಹಳೆ ವಿದ್ಯಾರ್ಥಿಗಳು, ಊರವರ ಕ್ರೀಡಾಕೂಟದ ಬಹುಮಾನ ವಿತರಣೆ ಮಾಡಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಸ್ವಾಗತಿಸಿ, ಶತಮಾನೋತ್ಸವ ಕಾರ್ಯಕ್ರಮ ಸಮಿತಿ ಅಧ್ಯಕ್ಷರಾದ ಹರಿರಾಮ ಕುಳೂರು ವಂದಿಸಿದರು. ಕಾರ್ಯದರ್ಶಿ ಶಶಿಕುಮಾರ್ ಕುಳೂರು ಕಾರ್ಯಕ್ರಮ ನಿರೂಪಿಸಿದರು.
ಶತಾಬ್ದಿ ಸಂಭ್ರಮದ ಸಮಾರೋಪ ಸಮಾರಂಭದ ಪ್ರಯುಕ್ತ ವಿವಿಧ ಸಾಂಸ್ಕøತಿಕ ನಡೆದವು. ಲವಾನಂದ ಎಲಿಯಾಣರ ಪ್ರಾಯೋಜಕತ್ವದಲ್ಲಿ ಡಾ. ರಾಜ್ ಕುಮಾರ್ ಹಿಟ್ಸ್ ರಸಮಂಜರಿ, ನವಯುವಕ ಕಲಾವೃಂದ ಚಿನಾಲ ಇವರ ಪ್ರಾಯೋಜಕತ್ವದಲ್ಲಿ ಡ್ಯಾನ್ಸ್ ಅಂಡ್ ಕಾಮಿಡಿ μÉೂೀ, ಶತಮಾನೋತ್ಸವ ಸಮಿತಿಯ ಪ್ರಾಯೋಜಕತ್ವದಲ್ಲಿ ರಂಗತರಂಗ ಕಾಪು ತಂಡದ ತುಳು ಸಾಂಸಾರಿಕ ಹಾಸ್ಯಮಯ ನಾಟಕ 'ಒರಿಯೆ' ಪ್ರದರ್ಶನಗೊಂಡಿತು.