ಕಾಸರಗೋಡು: ಕ ಸಾ ಪ ಕೇರಳ ಗಡಿನಾಡ ಘಟಕದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ , ಪ್ರಸಂಗಕರ್ತ, ಸಾಹಿತಿ ಮಧೂರು ವೆಂಕಟಕೃಷ್ಣ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಕ.ಸಾ.ಪ.ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ,ಡಾ.ಕೆ.ಕಮಲಾಕ್ಷ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನ್ಯಾಯವಾದಿ ಥೋಮಸ್ ಡಿಸೋಜ, ವಿಶಾಲಾಕ್ಷ ಪುತ್ರಕಳ, ಯೋಗೀಶ್ ರಾವ್ ಚಿಗುರುಪಾದೆ ಮೊದಲಾದವರು ಉಪಸ್ಥಿತರಿದ್ದು ಅಭಿನಂದಿಸಿದರು.