ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ವ್ಯಾಪಾರಿಗಳ ಮಧ್ಯೆ ನಡೆದ ಹೊಡೆದಾಟದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣೆ ಪೊಲೀಸರು ಆರು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಪೇಟೆಯಲ್ಲಿ ತರಕಾರಿ ಅಂಗಡಿ ನಡೆಸುವ ಚೆಡೆಕ್ಕಲ್ ನಿವಾಸಿ ಶರೀಫ್, ಸಕರಿಯಾ, ರಾಜೇಶ್, ರಂಜಿತ್, ಮುನ್ನ, ಗಿರೀಶ್ ಎಂಬವರಿಗೆ ಈ ಕೇಸು. ಶರೀಪ್, ರಾಜೇಶ್, ರಂಜಿತ್ ಎಂಬವರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ತರಕಾರಿ ಅಂಗಡಿ ಸಿಬ್ಬಂದಿ ಸಕರಿಯಾ ಹಾಗೂ ಬಾರ್ಬರ್ ಶಾಪ್ ಮಾಲಿಕ ರಆಜೇಶ್ ಮಧ್ಯೆ ವಾಗ್ವಾದ ನಡೆದಿದ್ದು, ಇವರನ್ನು ಸಮಾಧಾನಪಡಿಸಲು ಶರೀಫ್ ಮುಂದಾಗಿದ್ದರು. ಈ ಸಂದರ್ಭ ರಾಜೇಶ್ ಸಹೋದರ ರಂಜಿತ್ ಹಾಗೂ ಇತರರು ಸ್ಥಳಕ್ಕಾಗಮಿಸಿದಾಗ ವಾಗ್ವಾದ ಹೆಚ್ಚಾಗಿ ಪರಸ್ಪರ ಹೊಡೆದಾಟ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎರಡು ಪ್ರತ್ಯೇಕ ಕೇಸು ದಾಖಲಿಸಿಕೊಂಡಿದ್ದಾರೆ.