HEALTH TIPS

ಮುಂಗಾರು ಪೂರ್ವ ಮಳೆ-ಹೆಚ್ಚುತ್ತಿದೆ ಜ್ವರಬಾಧೆ: ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ


               ಕಾಸರಗೋಡು: ಜಿಲ್ಲೆಯಲ್ಲಿ ಬೇಸಿಗೆ ಮಳೆ ಆರಂಭಗೊಳ್ಳುತ್ತಿದ್ದಂತೆ ಜ್ವರ ಬಾಧೆಯೂ ಹೆಚ್ಚಾಗತೊಡಗಿದೆ.  ಬೇಸಿಗೆಯಲ್ಲಿ ಅಂತರ್ಜಲಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ಇದರಿಂದ ಕಲುಷಿತ ನೀರು ಸೇವಿಸಬೇಕಾದ ಪರಿಸಸ್ಥಿತಿ ಎದುರಾಗುತ್ತಿದೆ. ಬಹಳಷ್ಟು ಕಡೆ ವಾಹನಗಳಲ್ಲಿ ಕುಡಿಯುವ ನೀರು ಪುರೈಸಲಾಗುತ್ತಿದ್ದು, ಇಂತಹ ನೀರನ್ನು ಕುದಿಸಿ ತಣಿಸಿದ ನಂತರವಷ್ಟೆ ಕುಡಿಯಲು ಬಳಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ತೆರೆದ ಪ್ರದೇಶಗಳಲ್ಲಿ ವ್ಯಾಪಕವಾಗಿ ಎಸೆಯಲಾಗುವ ತ್ಯಾಜ್ಯ ಕೊಳೆತು ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಹಾದಿ ಮಾಡಿಕೊಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸುವುದೂ ಅನಿವಾರ್ಯ.

                   ಈಗಾಗಲೇ ಜ್ವರ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಹೆಚ್ಚಾಗತೊಡಗಿದೆ. 

ತಡೆಗಟ್ಟುವಿಕೆ ಹೇಗೆ:

           ಸಾಂಕ್ರಾಮಿಕ ರೋಗ ತಡೆಗಟ್ಟಲು ಆರೋಗ್ಯ ಇಲಾಖೆ ಕೆಲವೊಂದು ಮಾರ್ಗಸೂಚಿ ನೀಡಿದೆ. ಸೊಳ್ಳೆ ನಿವಾರಕ ಅಥವಾ ಸೊಳ್ಳೆ ಪರದೆಗಳನ್ನು ಬಳಸಿ, ಕುಡಿಯಲು ಮತ್ತು ಅಡುಗೆಗೆ ಚೆನ್ನಾಗಿ ಕುದಿಸಿದ ನೀರಿನ ಬಳಕೆ, ಕ್ಲೋರಿನೇಟ್ ಬಾವಿಗಳು, ಆಹಾರ ಸೇವನೆ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯುವುದು, ಮಲವಿಸರ್ಜನೆಯ ನಂತರ ಕೈಕಾಲುಗಳನ್ನು ಚೆನ್ನಾಗಿ ತೊಳೆಯಬೇಕು, ಸಾರ್ವಜನಿಕ ನಲ್ಲಿಗಳು ಮತ್ತು ಬಾವಿಗಳನ್ನು ಸ್ವಚ್ಛವಾಗಿರಿಸುವುದು, ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಕೊಳಚೆನೀರು ದಾಸ್ತಾನು ತಪ್ಪಿಸಬೇಕು, ಸೊಳ್ಳೆ ಮೂಲ ನಾಶವನ್ನು ಪರಿಣಾಮಕಾರಿಯಾಗಿ ನಡೆಸಬೇಕು, ನೀರಿನ ಪಾತ್ರೆಗಳನ್ನು ಮುಚ್ಚಿಡಬೇಕು, ವಾರಕ್ಕೊಮ್ಮೆ ಶುಚೀಕರಣ ನಡೆಸುವುದರೊಂದಿಗೆ ಡ್ರೈಡೇ ಆಚರಿಸಬೇಕು, ವಾರಕ್ಕೊಮ್ಮೆ ಮನೆಯಲ್ಲಿ ಒಳಾಂಗಣ ಸಸ್ಯಗಳ ನೀರನ್ನು ಕಡ್ಡಾಯವಾಗಿ ಬದಲಾಯಿಸಬೇಖು, ಕೊಳಚೆನೀರಿನಲ್ಲಿ ಕೆಲಸಮಾಡುವ ಕಾರ್ಮಿಕರು, ಕೃಷಿ ಕಾರ್ಮಿಕರು,  ಪಶುಪಾಲಕರು, ಶುಚೀಕರಣ ಕೆಲಸಗಳಲ್ಲಿ ತೊಡಗಿಸಿಕೊಲ್ಳುವವರು, ಕಟ್ಟಡ ಕಾರ್ಮಿಕರು ಮುಂತಾದವರು,  ಆರೋಗ್ಯ ಕಾರ್ಯಕರ್ತರ ಸೂಚನೆಯನ್ವಯ ವಾರಕ್ಕೊಂದುಬಾರಿ ಡಾಕ್ಸಿಸೈಕ್ಲಿನ್-200 ಮಿಗ್ರಾಂ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಇಲಿ ಜ್ವರ ಮುಂತಾದ ಅಪಾಯವನ್ನು ತಡೆಗಟ್ಟಲು ಸಾಧ್ಯ ಎಂದೂ ಆರೋಗ್ಯ ಇಲಾಖೆ ತಿಳಿಸಿದೆ.



    ಅಭಿಮತ: 

ಜ್ವರ ಬಾಧೆ ಕಾಣಿಸಿಕೊಂಡಲ್ಲಿ ಸ್ವಯಂ ಚಿಕಿತ್ಸೆ ನಡೆಸದೆ, ಸನಿಹದ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ನಡೆಸಬೇಕು. ಆರಂಭದ ಮಳೆಗೆ ಕುಡಿಯುವ ನೀರಿನೊಂದಿಗೆ ಕಲುಷಿತ ನೀರೂ ಸೇರ್ಪಡೆಗೊಳ್ಳುವ ಸಾಧ್ಯತೆಯಿದ್ದು, ಇದು ಸಾಂಕ್ರಾಮಿಕ ರೋಗ ಅತಿಶೀಘ್ರ ಹರಡಲು ಕಾರಣವಾಗಬಹುದು. ಇದರಿಂದ ಶುಚಿತ್ವ ಪಾಲನೆಗೆ ಹೆಚ್ಚಿನ ಆದ್ಯತೆ ಕಲ್ಪಿಸುವ ಮೂಲಕ ರೋಗ ತಡೆಗಟ್ಟಲು ಸಾರ್ವಜನಿಕರೂ ಸಹಕರಿಸಬೇಕಾಗಿದೆ.

                      ಡಾ. ಎ.ವಿ ರಾಮದಾಸ್, ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ)

                               ಕಾಸರಗೋಡು ಜಿಲ್ಲೆ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries