ಕಾಸರಗೋಡು: ವಿಶ್ವ ಪರಿಸರ ದಿನಾಚರಣೆಯ ಪೂರ್ವಭಾವಿಯಾಗಿ 'ನೋ ಪ್ಲಾಸ್ಟಿಕ್-ಬೀ ಫೆಂಟಾಸ್ಟಿಕ್'ಎಂಬ ಆಂಗ್ಲ ಭಾಷೆಯ ಸಂದೇಶದೊಂದಿಗೆ ಪರಿಸರ ಹೋರಾಟಗಾರ ಆರ್. ಪದ್ಮರಾಜನ್ ಕಾಸರಗೋಡಿನಿಂದ ತಿರುವನಂತಪುರ ವರೆಗೆ ಜಾಗೃತಿ ಸಂದೇಶದ ಪಾದಯಾತ್ರೆ ಆರಂಭಿಸಿದ್ದಾರೆ.
ಕೊಲ್ಲಂ ಜಿಲ್ಲಾ ಶುಚಿತ್ವ ಮಿಷನ್, ಕೊಟ್ಟಿಯಮ್ ರೋಟರಿ ಕ್ಲಬ್, ಕಾಸರಗೋಡು ಜಿಲ್ಲಾ ಶುಚಿತ್ವ ಮಿಷನ್‍ನ ಸಹಯೋಗದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಾಸರಗೋಡು ಪದ್ಮಶ್ರೀ ಅಲಿಮಾಣಿಕ್‍ಫಾನ್ ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಫಾರ್ ಓಷಿಯಾನೋಗ್ರಫಿ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಕಾಸರಗೋಡು ವಿದ್ಯಾನಗರದ ಸಿವಿಲ್ ಸಟೇಶನ್ ವಠಾರದಲ್ಲಿ ನಡೆದ ಸಮಾರಂಬದಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಐಎಎಸ್ ಪಾದಯಾತ್ರೆಗೆ ಚಾಲನೆ ನೀಡಿದರು. ತಿರುವನಂತಪುರಕ್ಕೆ ಜೂನ್ 5 ರಂದು ತಲುಪಲಿರುವ ಪಾದಯಾತ್ರೆ, ವಿಶ್ವ ಪರಿಸರ ದಿನಾಚರಣೆಯೊಂದಿಗೆ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಕೊಟ್ಟಿಯಂ ರೋಟರಿ ಕ್ಲಬ್ ಅಧ್ಯಕ್ಷ ಶಿಬು ರಾವುತರ್, ಕೋ-ಆರ್ಡಿನೇಟರ್ ರಾಜನ್ ಕೈನೋಸ್, ಕಾಸರಗೋಡು ರೋಟರಿ ಕ್ಲಬ್ ಅಧ್ಯಕ್ಷ ಗೌತಮ್ ಭಕ್ತ, ಕಾರ್ಯದರ್ಶಿ ಶ್ರೀಜೇಶ್, ಚೈಲ್ಡ್ ಪೆÇ್ರಟೆಕ್ಟ್ ರಾಜ್ಯಾಧ್ಯಕ್ಷ ಸಿ.ಕೆ.ನಾಸರ್, ಇಸಾಕುಞÂ ಸೀತಾಂಗೋಳಿ ಉಪಸ್ಥಿತರಿದ್ದರು.
ಜೀವಸಂಕುಲ ಹಾಗೂ ಪರಿಸರಕ್ಕೆ ಪ್ಲಾಸ್ಟಿಕ್‍ನಿಂದ ಹೆಚ್ಚಿನ ಹಾನಿ ಸಂಭವಿಸುತ್ತಿದ್ದು, ಇದರ ಬಳಕೆ ಬಗ್ಗೆ ಜನತೆ ಇನ್ನೂ ಜಾಗೃತರಾಗಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದರಿಂದ ಭೂಮಿಗೆ ಬಂಜೆತನ ಕಾಡಲಾರಂಭಿಸಿದೆ. ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸುವುದು ಯತ್ರೆ ಉದ್ದೇಶವಾಗಿದೆ ಎಂಬುದಾಗಿ ಪದ್ಮರಾಜ್ ತಿಳಿಸಿದ್ದಾರೆ.