ಕಣ್ಣೂರು: ರಾಜ್ಯದಲ್ಲಿ ಭಾರೀ ಮಳೆಗೆ ವ್ಯಾಪಕ ಹಾನಿಯಾಗಿದೆ. ಹಲವೆಡೆ ಮನೆ, ಕಟ್ಟಡಗಳು ಕುಸಿದು ಬೀಳುತ್ತಿದ್ದು, ಜಲಾವೃತಗೊಂಡು ಅಪಘಾತಗಳು ಸಂಭವಿಸುತ್ತಿವೆ.
ಕಣ್ಣೂರಿನಲ್ಲಿ ಮುಜಪಿಲಂಗಾಡ್ ಮತ್ತು ಪಯ್ಯನ್ನೂರಿನಲ್ಲಿ ಎರಡು ಮನೆಗಳು ಮಳೆಗೆ ಕುಸಿದಿವೆ. ಮನೆಯೊಂದರಲ್ಲಿ ಅವಘಡ ಸಂಭವಿಸಿದಾಗ ಕೊಠಡಿಯಲ್ಲಿ ಮಲಗಿದ್ದ ಐದು ವರ್ಷದ ಬಾಲಕಿ ಬದುಕುಳಿದಿರುವುದು ಪವಾಡವೇ ಸರಿ.
ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಆದರೆ ಮಗು ಅದೃಷ್ಟವಶಾತ್ ಪಾರಾಗಿದೆ. ಮುಳಪಿಲಂಗಾಡ್ ಬೀಚ್ ರಸ್ತೆಯಲ್ಲಿರುವ ಖಾದರ್ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ.
ಭಾರೀ ಮಳೆಗೆ ಪಯ್ಯನ್ನೂರು ಕೆಲೋತ್ ಉಣ್ಣಿ ಅವರ ಮನೆ ಸಂಪೂರ್ಣ ನಾಶವಾಗಿದೆ. ಅವಘಡದ ವೇಳೆ ಮನೆಯವರು ಹೊರಗಿನ ವರಾಂಡಾದಲ್ಲಿ ಊಟ ಮಾಡುತ್ತಿದ್ದು, ಬಚಾವಾಗಿದ್ದಾರೆ. ಘಟನೆಯಲ್ಲಿ ಉಣ್ಣಿ ಅವರ ಸೋದರ ಮಾವನ ಕೈಗೆ ಗಾಯವಾಗಿದೆ. ವಾಸಕ್ಕೆ ಏನು ಮಾಡಬೇಕೆಂದು ಕುಟುಂಬದವರು ಚಿಂತಾಕ್ರಾಂತರಾಗಿದ್ದಾರೆ.