HEALTH TIPS

ಚರ್ಚೆ ಬಳಿಕ ಪರಿಷ್ಕರಣೆ ಸೂಕ್ತ: ಡ್ರೈವಿಂಗ್ ಸ್ಕೂಲ್ ಮಾಲೀಕರು

                 ಪತ್ತನಂತಿಟ್ಟ: ವಿಸ್ತೃತ ಸಮಾಲೋಚನೆಯ ನಂತರವೇ ಡ್ರೈವಿಂಗ್ ಟೆಸ್ಟ್ ಸುಧಾರಣೆಯನ್ನು ಜಾರಿಗೊಳಿಸಬೇಕು ಎಂದು ಡ್ರೈವಿಂಗ್ ಸ್ಕೂಲ್ ಮಾಲೀಕರು ಒತ್ತಾಯಿಸಿದ್ದಾರೆ.

              ಪರೀಕ್ಷೆಯಲ್ಲಿ ಲೋಪದೋಷ, ವಿಕಲ್ಪಗಳಿದ್ದರೆ ಸರಿಪಡಿಸಿ ಸಕಾಲದಲ್ಲಿ ಸುಧಾರಣೆ ತರುವುದಕ್ಕೆ ವಿರೋಧವಿಲ್ಲ, ವರ್ಷಗಳಿಂದ ಕೆಲಸ ಮಾಡುತ್ತಿರುವ ಡ್ರೈವಿಂಗ್ ಸ್ಕೂಲ್, ಯೂನಿಯನ್, ಅಧಿಕಾರಿಗಳೊಂದಿಗೆ ಪರಸ್ಪರ ಚರ್ಚಿಸಿ ಸಕಾಲದಲ್ಲಿ ಅನುಷ್ಠಾನಗೊಳಿಸಬೇಕು ಎನ್ನುತ್ತಾರೆ ಮಾಲೀಕರು.

                ಈಗ ಸಾರಿಗೆ ಸಚಿವರು ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರವನ್ನು ಹೇರಲು ಯತ್ನಿಸುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಸರಿಯಾದ ಮಾರ್ಗದರ್ಶನ ಮತ್ತು ಮೂಲಸೌಕರ್ಯವಿಲ್ಲದೆ ತರಾತುರಿಯಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಪ್ರಯತ್ನಿಸುವುದು ಸಾರ್ವಜನಿಕ ಬೆಂಬಲವನ್ನು ಗಳಿಸುವುದಿಲ್ಲ.

                 ಪ್ರಸ್ತುತ ಸುಧಾರಣೆಗಳು ದೊಡ್ಡ ವ್ಯಕ್ತಿಗಳಿಗೆ ಸಹಾಯ ಮಾಡುವ ಪ್ರಯತ್ನವಾಗಿದೆ ಎಂದು ಅವರು  ಆರೋಪಿಸಿದ್ದಾರೆ. ಎಂವಿಡಿ ಅಧಿಕಾರಿಗಳು ಕೂಡ ಹೊಸ ಸುಧಾರಣೆಯಿಂದ ಗೊಂದಲಕ್ಕೊಳಗಾಗಿದ್ದಾರೆ.

                 ರಾಜ್ಯದಲ್ಲಿ ಸುಮಾರು ಏಳು ಸಾವಿರ ಡ್ರೈವಿಂಗ್ ಶಾಲೆಗಳಿವೆ. ಇವೆಲ್ಲವೂ ಸುಮಾರು ಒಂದು ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಹೊಸ ಸುಧಾರಣೆಯಿಂದ ಅವರೆಲ್ಲರಿಗೂ ಅಷ್ಟೇ ಕಷ್ಟವಾಗಲಿದೆ,  ಪರವಾನಗಿ ಪಡೆಯುವ ವೆಚ್ಚವೂ ತೀವ್ರವಾಗಿ ಏರಿದೆ. ಚಾಲನಾ ತರಬೇತಿ ಮತ್ತು ಪರವಾನಗಿ ವಿಚಾರದಲ್ಲಿ ಕೇಂದ್ರ ಸರ್ಕಾರ 2013ರಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದು ಅಸ್ತಿತ್ವದಲ್ಲಿರುವಾಗ, ಕೇರಳದಲ್ಲಿ ಮಾತ್ರ ವಿಶೇಷ ಕಾರ್ಯವಿಧಾನಗಳನ್ನು ತರುವುದನ್ನು ಒಪ್ಪಿಕೊಳ್ಳಲಾಗದು. 

              ಸುಧಾರಣೆಗೆ ಸಂಬಂಧಿಸಿದಂತೆ ಸಾರಿಗೆ ಆಯುಕ್ತರ ಸುತ್ತೋಲೆಗೂ ಮುನ್ನವೇ ರಾಜ್ಯದಲ್ಲಿ ಸುಮಾರು ಒಂಬತ್ತು ಲಕ್ಷ ಮಂದಿ ಶುಲ್ಕ ಪಾವತಿಸಿ ಪರೀಕ್ಷೆಗೆ ಕಾಯುತ್ತಿದ್ದಾರೆ. ಏಪ್ರಿಲ್‍ನಲ್ಲಿ ಸುಮಾರು ಎರಡೂವರೆ ಲಕ್ಷ ಮಂದಿ ಪರೀಕ್ಷಾ ಶುಲ್ಕ ಪಾವತಿಸಿದ್ದಾರೆ. ಹೊಸ ನಿಯಮಾವಳಿ ಪ್ರಕಾರ ಪರೀಕ್ಷಾರ್ಥ ಟ್ರಾಕ್ ನಿರ್ಮಿಸಲು ಕನಿಷ್ಠ 50 ಸೆಂಟ್ಸ್ ಭೂಮಿ ಮತ್ತು 25 ಲಕ್ಷ ರೂಪಾಯಿ ಬೇಕು ಎಂದು ಡ್ರೈವಿಂಗ್ ಸ್ಕೂಲ್ ಮಾಲೀಕರು ಸೂಚಿಸುತ್ತಾರೆ.

                    ಆದರೆ ತಿರುವನಂತಪುರಂ, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಹೊರತುಪಡಿಸಿ ರಾಜ್ಯದ ಬಹುತೇಕ ಪ್ರಾದೇಶಿಕ ಸಾರಿಗೆ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಯಾ ಸ್ಥಳಗಳ ಡ್ರೈವಿಂಗ್ ಸ್ಕೂಲ್ ಮಾಲೀಕರು ಬಾಡಿಗೆಗೆ ಪಡೆದ ಮೈದಾನದಲ್ಲಿ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. 

                   ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಸರ್ಕಾರಕ್ಕೆ ಚಾಲನಾ ಪರೀಕ್ಷೆಗೆ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಲು ಅಗತ್ಯ ಮೊತ್ತವನ್ನೂ ಹುಡುಕಲು ಸಾಧ್ಯವಾಗುತ್ತಿಲ್ಲ. ಕೇವಲ ಪರೀಕ್ಷೆಯನ್ನು ಮಾರ್ಪಡಿಸುವುದರಿಂದ ರಸ್ತೆ ಅಪಘಾತಗಳು ಅಥವಾ ಅಪಘಾತದ ಸಾವುಗಳು ಕಡಮೆಯಾಗುವುದಿಲ್ಲ. ರಸ್ತೆಯನ್ನು ಅಗಲೀಕರಣಗೊಳಿಸಿ ವೈಜ್ಞಾನಿಕವಾಗಿ ಸಂಚರಿಸುವಂತೆ ಮಾಡಬೇಕು. ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು ಮತ್ತು ಸಿಬ್ಬಂದಿ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು. ಅಧಿಕಾರಿಗಳು ತಪ್ಪುಗಳನ್ನು ತಪ್ಪಿಸಲು ವ್ಯವಸ್ಥೆ ಮಾಡುವತ್ತ ಗಮನಹರಿಸಬೇಕು, ದಂಡ ವಿಧಿಸುವತ್ತ ಗಮನ ಹರಿಸಬಾರದು.

                   ಹೆಚ್ಚಿನ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಬೇಕು. ವಾಹನ ನಿರೀಕ್ಷಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಗುರಿ ನಿಗದಿಪಡಿಸುವ ಪರಿಪಾಠ ತಪ್ಪಿಸಬೇಕು. ವಿಜಿಲೆನ್ಸ್ ಅಧಿಕಾರಿಗಳಿಗೆ ಕೂಡ ಟಿಪ್ಪರ್, ಜೆಸಿಬಿ ಇತ್ಯಾದಿಗಳನ್ನು ಜಪ್ತಿ ಮಾಡಿ ದಂಡ ಪಾವತಿಸಲು ಟಾರ್ಗೆಟ್ ನೀಡಲಾಗಿದೆ. ಇದರೊಂದಿಗೆ ಈಗಿರುವ ಸಂಚಾರ ವ್ಯವಸ್ಥೆಯನ್ನು ಕಿತ್ತು ಹಾಕಬೇಕು ಎನ್ನುತ್ತಾರೆ.

               ಅನೇಕರು ಜೀವನೋಪಾಯಕ್ಕಾಗಿ ಪರವಾನಗಿ ತೆಗೆದುಕೊಳ್ಳುತ್ತಾರೆ. ಪರವಾನಿಗೆಗೆ ಅರ್ಜಿ ಸಲ್ಲಿಸುವವರಲ್ಲಿ ಹೆಚ್ಚಿನವರು ಜೀವನೋಪಾಯಕ್ಕಾಗಿ ಆಟೋ, ಟ್ಯಾಕ್ಸಿ ಸೇರಿದಂತೆ ಭಾರೀ ವಾಹನಗಳನ್ನು ಓಡಿಸುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಜನರು ಬಸ್ ಸೌಕರ್ಯವಿಲ್ಲದ ಒಳ ಪ್ರದೇಶಗಳಿಂದ ದ್ವಿಚಕ್ರ ವಾಹನಗಳನ್ನು ಅವಲಂಬಿಸಿದ್ದಾರೆ. ಸುಧಾರಣೆಗಳನ್ನು ಜಾರಿಗೊಳಿಸುವಾಗ ಇವೆಲ್ಲವನ್ನೂ ಪರಿಗಣಿಸಬೇಕು ಎನ್ನುತ್ತಾರೆ ಡ್ರೈವಿಂಗ್ ಸ್ಕೂಲ್ ಮಾಲೀಕರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries