ನವದೆಹಲಿ: ಪೂಂಛ್‌ನಲ್ಲಿ ನಡೆದ ಘಟನೆಯು ಉಗ್ರರದಾಳಿಯ ಆತಂಕಕಾರಿ ಪ್ರವೃತ್ತಿಯ ಭಾಗವಾಗಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಪಕ್ಷ ಮತ್ತು 'ಇಂಡಿಯಾ' ಕೂಟವು ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯನ್ನು ಬಲಪಡಿಸಲು ಸರ್ವ ಪ್ರಯತ್ನಗಳನ್ನೂ ಮಾಡಲಿದೆ ಎಂದು ಕಾಂಗ್ರೆಸ್ ಭಾನುವಾರ ತಿಳಿಸಿದೆ.

ಸುರನ್‌ಕೋಟ್ ಪ್ರದೇಶದ ಶಾಸಿತರ್‌ನಲ್ಲಿ ಶನಿವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ ಭಾರತೀಯ ವಾಯು ಸೇನೆಯ ಐವರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ಪೈಕಿ ಒಬ್ಬರು ನಂತರ ಸೇನಾ ಆಸ್ಪತ್ರೆಯಲ್ಲಿ ಮೃತಪಟ್ಟರು.
ಉಗ್ರ ದಾಳಿಯ ಘಟನೆಯ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಇದು ಕಳವಳಕಾರಿ ವಿಷಯವಾಗಿದ್ದು, 2023ರ ಜನವರಿ ಒಂದರಿಂದ ನಮ್ಮ 25 ರಕ್ಷಣಾ ಸಿಬ್ಬಂದಿ ಮತ್ತು ಎಂಟು ನಾಗರಿಕರು ರಜೌರಿ-ಪೂಂಛ್ ಭಾಗದಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಈ ಪ್ರದೇಶದಲ್ಲಿ 2007ರಿಂದ 2014ರವರೆಗೆ ಯಾವುದೇ ದೊಡ್ಡ ಭಯೋತ್ಪಾದನಾ ಕೃತ್ಯ ನಡೆದಿರಲಿಲ್ಲ' ಎಂದು ತಿಳಿಸಿದ್ದಾರೆ.
ಶನಿವಾರ ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, 'ಹೇಡಿತನದ ಕೃತ್ಯವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಹಾಗೂ ಭಯೋತ್ಪಾದನೆಯ ವಿರುದ್ಧ ದೇಶದ ಜತೆ ನಿಲ್ಲಲಿದೆ' ಎಂದು ಉಲ್ಲೇಖಿಸಿದ್ದರು.