ಮಂಜೇಶ್ವರ : ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಅರಸು ಮಂಜಿμÁ್ಣರ್ ಅಣ್ಣ ತಮ್ಮ ದೈವಗಳ ಕ್ಷೇತ್ರದ ಮೇ 9 ರಂದು ಆರಂಭಗೊಂಡು ಕಳೆದ 5 ದಿನಗಳಲ್ಲಾಗಿ ನಡೆದ ಜಾತ್ರೆ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ಸಮಾಪ್ತಿಗೊಂಡಿತು. ಮಂಗಳವಾರ ಧ್ವಜಾವರೋಹಣ ನಡೆಯಿತು.
ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀ ಅರಸು ದೈವಗಳ ವμರ್Áವಧಿ ಉತ್ಸವಕ್ಕೆ ಈ ಸಲ ಎಲ್ಲಾ ವರ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದು ವಿಶೇಷವಾಗಿತ್ತು.
ಎಲ್ಲಾ ವರ್ಷದ ಸಂಪ್ರದಾಯದಂತೆ ಕಟ್ಟೆಯ ಒಂದು ಭಾಗದಲ್ಲಿ ಹಿಂದೂ ಬಾಂಧವರು ಹಾಗೂ ಇನ್ನೊಂದು ಭಾಗದಲ್ಲಿ ಮುಸಲ್ಮಾನರು ಕುಳಿತು ಉತ್ಸವ ವೀಕ್ಷಿಸಿದರು.
ಎರಡು ದಿನಗಳಲ್ಲಿ ನಡೆದ ಬಂಡಿ ಉತ್ಪವ ವೀಕ್ಷಿಸಲು ಜನ ಸಾಗರವೇ ಹರಿದು ಬಂದಿತ್ತು. ನೂತನ ಷಟ್ಪಥ ರಸ್ತೆ ಆರಂಭಗೊಂಡ ಬಳಿಕ ಭಕ್ತಾಭಿಮಾನಿಗಳು ಕಿಲೋ ಮೀಟರುಗಳ ತನಕ ನಡೆದು ಬಂದ ದೃಶ್ಯ ಕಂಡು ಬಂತು.
ಎಲ್ಲಾ ವರ್ಷ ಮಳೆಯ ಕಾರಣ ಭಕ್ತಾಭಿಮಾನಿಗಳು ಚದುರಿ ಹೋಗುತ್ತಿದ್ದರೂ ಈ ಬಾರಿ ಮಳೆ ಸುರಿಯದ ಕಾರಣ ಭಕ್ತಾಭಿಮಾನಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿತ್ತು. ಅಣ್ಣ ತಮ್ಮ ದೈವಗಳ ನೇಮದ ಬಳಿಕ ಕೊನೆಯ ಬಂಡಿ ಉತ್ಸವ ನಡೆದು ಸುಡುಮದ್ದು ಪ್ರದರ್ಶನ ನಡೆಯಿತು.
ಉತ್ಸವದ ಭಾಗವಾಗಿ ಕುಂಜತ್ತೂರು ಅಂಡರ್ ಪಾಸಿನಲ್ಲಿ ವಾಹನ ದಟ್ಟನೆಯಿಂದ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾದ ಹಿನ್ನೆಲೆಯಲ್ಲಿ ಉತ್ಸವದ ಎಲ್ಲಾ ದಿನಗಳಲ್ಲೂ ಸ್ಥಳೀಯ ಸಮಾಜ ಸೇವಕರಾದ ಅಕ್ಟರ್ ಹಾಗೂ ಸಮದ್ ರವರ ನೇತೃತ್ವದಲ್ಲಿ ವಾಹನ ಸಂಚಾರ ಸುಗಮ ಗೊಳಿಸಿ ಹಿಂದೂ ಮುಸ್ಲಿಂ ಸಾಮರಸ್ಯತೆಯನ್ನು ಗಟ್ಟಿಗೊಳಿಸುವ ದೃಶ್ಯ ಜನಮನ್ನಣೆಗೆ ಪಾತ್ರವಾಯಿತು.