ಬಿಜಾಪುರ್: ಇಲ್ಲಿನ ಕುಟ್ರೂ-ಫರ್ಸೆಗಢ ರಸ್ತೆಯಲ್ಲಿರುವ ಸೋಮನಪಲ್ಲಿಯಲ್ಲಿ ಬುಧವಾರ ಪೊಲೀಸ್ ಕಾರಿಗೆ ನಕ್ಸಲರು ಅಳವಡಿಸಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಇಬ್ಬರು ಪೊಲೀಸರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಜಾಪುರ್: ಇಲ್ಲಿನ ಕುಟ್ರೂ-ಫರ್ಸೆಗಢ ರಸ್ತೆಯಲ್ಲಿರುವ ಸೋಮನಪಲ್ಲಿಯಲ್ಲಿ ಬುಧವಾರ ಪೊಲೀಸ್ ಕಾರಿಗೆ ನಕ್ಸಲರು ಅಳವಡಿಸಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಇಬ್ಬರು ಪೊಲೀಸರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
'ಫರ್ಸೆಗಢ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಕಾಶ್ ಮಸೀಹ್ ಹಾಗೂ ಕಾನ್‌ಸ್ಟೆಬಲ್ ಸಂಜಯ್ ಅವರು ಸರ್ಕಾರಿ ಕಾರ್ಯನಿಮಿತ್ತ ಬಿಜಾಪುರಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ನಕ್ಸಲರು ಸುಧಾರಿತ ಸ್ಫೋಟಕ ಉಪಕರಣ(ಐಇಡಿ) ಬಳಸಿ ಈ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಇಬ್ಬರೂ ಪೊಲೀಸರಿಗೆ ಯಾವುದೇ ಅಪಾಯವಾಗಿಲ್ಲ. ಸ್ಫೋಟದಿಂದಾಗಿ ಕಾರಿನ ಬಾನೆಟ್ ಛಿದ್ರಗೊಂಡಿದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬಾಂಬ್ ದಾಳಿ ಹಿಂದಿನ ರೂವಾರಿಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಛತ್ತೀಸಗಢ ಶಸ್ತ್ರಾಸ್ತ್ರ ಪಡೆ ಹಾಗೂ ಫರ್ಸೆಗಢ ಠಾಣೆ ಪೊಲೀಸರು ಈ ಪ್ರದೇಶದಲ್ಲಿ ಗಸ್ತು ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ.