ನವದೆಹಲಿ: ಅಕ್ರಮ ಚಿನ್ನ ಸಾಗಾಟ(Gold Smuggling) ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಶಶಿ ತರೂರ್(Shashi Tharoor) ಅವರ ಆಪ್ತ ಸಹಾಯಕನನ್ನು ಅರೆಸ್ಟ್ ಮಾಡಲಾಗಿದೆ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ(IGI Airport)ದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶಶಿ ತರೂರ್ ಅವರ ಪಿಎ ಶಿವ ಪ್ರಸಾದ್ ಅವರನ್ನು ವಶಕ್ಕೆ ಪಡೆಸಿದ್ದಾರೆ.
ಶಿವ ಕುಮಾರ್ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಕಸ್ಟಮ್ಸ್ ಅಧಿಕಾರಿಗಳು ಟರ್ಮಿನಲ್ 3ರಲ್ಲಿ ಅವರನ್ನು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ದುಬೈನಿಂದ ತಮ್ಮ ಸಹಾಯಕನ ಮೂಲಕ ಅಕ್ರಮವಾಗಿ ಚಿನ್ನವನ್ನು ಶಿವಕುಮಾರ್ ತರಿಸಿದ್ದರು. ಇದನ್ನು ಪಡೆಯುವ ವೇಳೆ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು 30ಲಕ್ಷ ರೂ.ಗೂ ಅಧಿಕ ಮೊತ್ತದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕುಮಾರ್ ದುಬೈನಿಂದ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಕಸ್ಟಮ್ಸ್ ಆದಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದ್ದು, ಚಿನ್ನ ಎಲ್ಲಿಂದ ಬಂತು ಹೇಗೆ ಬಂದು ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಕುಮಾರ್ ಅಧಿಕಾರಿಗಳ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡಿಲ್ಲ. ಹೀಗಾಗಿ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇನ್ನು ಕೆಲವು ದಿನಗಳ ಹಿಂದೆ ಭಾರತದಿಂದ ದುಬೈಗೆ ಕೋಟ್ಯಂತರ ರೂ ಮೌಲ್ಯದ ಚಿನ್ನವನ್ನು ಕಳ್ಳ ಸಾಗಾಣೆಮಾಡುತ್ತಿದ್ದ ಅಫ್ಘಾನಿಸ್ತಾನದ ರಾಜತಾಂತ್ರಿಕ(Afghan diplomat) ಅಧಿಕಾರಿಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಲೆಗೆ ಬಿದ್ದಿದ್ದರು. ಅಫ್ಘಾನಿಸ್ತಾನದ(Afghanistan) ಇಸ್ಲಾಮಿಕ್ ರಿಪಬ್ಲಿಕ್‌ನ ರಾಜತಾಂತ್ರಿಕ ಅಧಿಕಾರಿ ಜಾಕಿಯಾ ವಾರ್ದಕ್ ಅವರು ಬರೋಬ್ಬರಿ 18.6 ಕೋಟಿ ರೂ. ಮೌಲ್ಯದ 25 ಕೆ.ಜಿ. ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವೇಳೆ ಏರ್‌ಪೋರ್ಟ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.
ಇನ್ನು ಚುನಾವಣೆ ಸಂದರ್ಭದಲ್ಲೇ ತಮ್ಮ ಆಪ್ತ ಸಹಾಯಕನ ಬಂಧನ ಆಗಿರುವುದು ಶಶಿ ತರೂರ್ ಅವರಿಗೆ ಮುಜುಗರ ತಂದಿದೆ. ಶಶಿ ತರೂರ್ ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಹಾಲಿ ಸಂಸದನಾಗಿದ್ದು, ಈ ಬಾರಿ ಅವರಿಗೆ ಪೈಪೋಟಿ ನೀಡಲು ಬಿಜೆಪಿಯಿಂದ (bjp) ರಾಜೀವ್ ಚಂದ್ರಶೇಖರ್ ಮತ್ತು ಸಿಪಿಐ (cpi) ನಾಯಕ ಪನ್ನಯನ್ ರವೀಂದ್ರನ್ (Pannyan Raveendran) ಕಣಕ್ಕೆ ಇಳಿದಿದ್ದಾರೆ.
59 ವರ್ಷದ ಚಂದ್ರಶೇಖರ್ ಮತ್ತು 67 ವರ್ಷದ ತರೂರ್ ಇಬ್ಬರೂ ರಾಷ್ಟ್ರ ಮಟ್ಟದ ನಾಯಕರು. ಇವರಿಬ್ಬರೂ ತಮ್ಮದೇ ಆದ ಸಾಧನೆಗಳಿಂದ ಗುರುತಿಸಿಕೊಂಡಿದ್ದಾರೆ. ಇವರಿಗೆ ಪೈಪೋಟಿ ನೀಡಲು 78 ವರ್ಷದ ರವೀಂದ್ರನ್ ಸ್ಪರ್ಧೆಗೆ ಇಳಿದಿದ್ದು, ತಳಮಟ್ಟದ ನಾಯಕ ಎನ್ನುವ ಖ್ಯಾತಿ ಇವರಿಗೆ ಇದೆ.