HEALTH TIPS

ಪ್ರಯಾಣ ವಿಳಂಬವಾದರೆ, ಟಿಕೆಟ್ ಮೊತ್ತ ಮರುಪಾವತಿ: ವಿಫಲರಾದರೆ ಅಧಿಕಾರಿಗಳಿಗೆ ದಂಡ: ಹೊಸ ಉಪಕ್ರಮಗಳತ್ತ ಕೆ.ಎಸ್.ಆರ್.ಟಿ.ಸಿ

                  ತಿರುವನಂತಪುರಂ: ನಷ್ಟದಲ್ಲಿರುವ ಕೆಎಸ್‍ಆರ್‍ಟಿಸಿಯನ್ನು ಚೇತರಿಸಿಕೊಳ್ಳಲು ಹೊಸ ನೀತಿ ಪ್ರಕಟಗೊಳ್ಳುತ್ತಿದೆ. ಟಿಕೆಟ್ ಕಾಯ್ದಿರಿಸಿದವರ ಹಕ್ಕುಗಳಿಗೆ ಆದ್ಯತೆ ನೀಡಲು ಬದಲಾವಣೆ ಮಾಡಲಾಗುವುದು. 

                 ಮರುಪಾವತಿ ನೀತಿ ಸೇರಿದಂತೆ ಬದಲಾವಣೆ ಮಾಡುವ ಮೂಲಕ ಪ್ರಯಾಣಿಕರನ್ನು ಸೆಳೆಯುವುದು ಕೆಎಸ್‍ಆರ್‍ಟಿಸಿ ನಿರ್ಧಾರ.

                    ಕೆಎಸ್‍ಆರ್‍ಟಿಸಿ ಬಸ್‍ಗಳ ವಿಳಂಬದಿಂದ ಪ್ರಯಾಣ ರದ್ದುಗೊಳಿಸಿದರೆ, ಟಿಕೆಟ್ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಬಸ್ಸು ಎರಡು ಗಂಟೆಗಿಂತ ಹೆಚ್ಚು ತಡವಾದರೆ ಪ್ರಯಾಣಿಕರು ಮರುಪಾವತಿ ಕೇಳಬಹುದು. ಈ ಮೊತ್ತವನ್ನು 24 ಗಂಟೆಗಳ ಒಳಗೆ ಮರುಪಾವತಿಸಲಾಗುತ್ತದೆ.                ತಾಂತ್ರಿಕ ಸಮಸ್ಯೆಗಳು ಅಥವಾ ರಸ್ತೆ ಅಪಘಾತದ ಕಾರಣದಿಂದ ಪ್ರಯಾಣ  ಪೂರ್ಣಗೊಳಿಸಲಾಗದಿದ್ದರೆ, ಎರಡು ದಿನಗಳಲ್ಲಿ ಮೊತ್ತವನ್ನು ಮರುಪಾವತಿಸಲಾಗುವುದು. ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲು ವಿಫಲವಾದಲ್ಲಿ, ಅಧಿಕಾರಿಗಳಿಗೆ ದಂಡ ವಿಧಿಸಲಾಗುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries