ನವದೆಹಲಿ: ಜಾಗತಿಕವಾಗಿ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕೋವಿಡ್ ಲಸಿಕೆಯನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಕೋವಿಶೀಲ್ಡ್ ಲಸಿಕೆ ತಯಾರಕ ಕಂಪನಿ ಆಸ್ಟ್ರಾಜೆನಿಕಾ ಹೇಳಿದೆ.
ಅಲ್ಲದೆ, ಯೂರೋಪ್‌ನಿಂದ ವಾಕ್ಸ್‌ಜೆವ್ರಿಯಾ ಲಸಿಕೆಯ ಮಾರುಕಟ್ಟೆ ಅನುಮತಿ ಹಿಂತೆಗೆದುಕೊಳ್ಳುವುದಾಗಿಯೂ ಸಂಸ್ಥೆ ಹೇಳಿದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕೋವಿಡ್ ಲಸಿಕೆಗಳಿರುವುದರಿಂದ ತಮ್ಮ ಲಸಿಕೆ ಹಿಂಪಡೆಯುತ್ತಿರುವುದಾಗಿ ಅದು ಹೇಳಿದೆ.
ತಮ್ಮ ಕಂಪನಿಯ ಕೋವಿಡ್ ಲಸಿಕೆಯ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದಲ್ಲಿ ಪ್ಲೇಟ್‌ಲೆಟ್ಸ್ ತಗ್ಗುವಿಕೆಯಂತಹ ಅಡ್ಡ ಪರಿಣಾಮ ಉಂಟಾಗುತ್ತಿದೆ ಎಂದು ಆಂಗ್ಲೋ-ಸ್ವೀಡನ್ ಔಷಧ ತಯಾರಿಕಾ ಕಂಪನಿ ಆಸ್ಟ್ರಾ ಜೆನಿಕಾ ಲಂಡನ್ ಕೋರ್ಟ್‌ಗೆ ಸಲ್ಲಿಸಿದ ದಾಖಲೆಯಲ್ಲಿ ಉಲ್ಲೇಖಿಸಿತ್ತು.
ಮಾರ್ಚ್ 5ರಂದೇ ಲಸಿಕೆ ಹಿಂಪಡೆಯಲು ಕಂಪನಿಯು ಅರ್ಜಿ ಸಲ್ಲಿಕೆಯಾಗಿದ್ದು, ಮಂಗಳವಾರದಿಂದ(ಮೇ.7) ಜಾರಿಗೆ ಬಂದಿದೆ ಎಂದು ಈ ಬೆಳವಣಿಗೆಗಳ ಬಗ್ಗೆ ಮೊದಲು ವರದಿ ಮಾಡಿದ್ದ ಟೆಲಿಗ್ರಾಫ್ ಹೇಳಿದೆ.