ಮುಳ್ಳೇರಿಯ: ಕೇರಳ ಜರ್ನಲಿಸ್ಟ್ ಯೂನಿಯನ್ (ಕೆಜೆಯು) 24 ನೇ ಸಂಸ್ಥಾಪನಾ ದಿನದ ಅಂಗವಾಗಿ ಮಂಗಳವಾರ ರಾಜಪುರಂನ ಕೆಜೆಯು ಪ್ರಾದೇಶಿಕ ಸಮಿತಿಯ ನೇತೃತ್ವದಲ್ಲಿ ರಾಜಪುರಂ ನಗರದಲ್ಲಿ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಾದೇಶಿಕ ಸಮಿತಿ ಅಧ್ಯಕ್ಷ ರವೀಂದ್ರ ಕೋಟೋಡಿ ಧ್ವಜಾರೋಹಣ ನಿರ್ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಸುರೇಶ ಕೂಕ್ಕಲ್, ಜಿ.ಶಿವದಾಸ್, ನೌಶಾದ್ ಚುಳ್ಳಿಕ್ಕರ ಮತ್ತಿತರರು ಮಾತನಾಡಿದರು.