HEALTH TIPS

ಕೇರಳ ನರ್ಸಿಂಗ್ ಕೌನ್ಸಿಲ್‍ಗೆ ಪರಿಶೀಲನೆಯಿಲ್ಲದೆ ಸದಸ್ವತ್ವ ನೀಡಲು ಯಾವುದೇ ಅಧಿಕಾರವಿಲ್ಲ

              ತಿರುವನಂತಪುರ: ಖಾಸಗಿ ನರ್ಸಿಂಗ್ ಕಾಲೇಜುಗಳಿಗೆ ತಪಾಸಣೆ ನಡೆಸದೆ ಸದಸ್ಯತ್ವ ನೀಡುವ ಆರೋಗ್ಯ ಸಚಿವರ ಪ್ರಸ್ತಾವನೆಗೆ ಕೇರಳ ನರ್ಸಿಂಗ್ ಕೌನ್ಸಿಲ್ ವಿರೋಧ ವ್ಯಕ್ತಪಡಿಸಿದೆ.

                ಕೆಎನ್‍ಸಿ ಪ್ರಕಾರ, ಸರ್ಕಾರ ನಿರ್ದೇಶನ ನೀಡಿದರೂ ಪರಿಶೀಲನೆ ಇಲ್ಲದೆ ಸದಸ್ಯತ್ವ ನೀಡಲಾಗುವುದಿಲ್ಲ. ಶುಕ್ರವಾರದ ನರ್ಸಿಂಗ್ ಕೌನ್ಸಿಲ್ ಸಭೆಯ ನಂತರ ಅಧಿಕಾರಿಗಳ ಮುಂದೆ ಈ ಬಗ್ಗೆ ಸ್ಪಷ್ಟನೆ ನೀಡಲಾಗುವುದು. ಕೇರಳ ನರ್ಸಿಂಗ್ ಕೌನ್ಸಿಲ್ ಪರೀಕ್ಷೆಯಿಲ್ಲದೆ ಸದಸ್ವತ್ವ ನೀಡಲು ಅಧಿಕಾರ ಹೊಂದಿಲ್ಲ. ಸರ್ಕಾರ ಒತ್ತಾಯಿಸಿದರೆ ಭಾರತೀಯ ನರ್ಸಿಂಗ್ ಕೌನ್ಸಿಲ್ ಗೆ ಮನವರಿಕೆ ಮಾಡಿಕೊಡುವ ಕ್ರಮ ಕೈಗೊಳ್ಳಲಾಗುವುದು.

               ಕಾಲೇಜು ಪ್ರಾರಂಭಿಸಿದ ಮೊದಲ ನಾಲ್ಕು ವರ್ಷಗಳ ಕಾಲ ಭಾರತೀಯ ನರ್ಸಿಂಗ್ ಕೌನ್ಸಿಲ್, ಕೇರಳ ನರ್ಸಿಂಗ್ ಕೌನ್ಸಿಲ್ ಮತ್ತು ಆರೋಗ್ಯ ವಿಶ್ವವಿದ್ಯಾಲಯಗಳ ತಪಾಸಣೆಯ ನಂತರವೇ ಅಫಿಲಿಯೇಷನ್ ನೀಡಬೇಕು ಎಂಬುದು ನಿಯಮ. ಈ ಕಡ್ಡಾಯ ನಿಬಂಧನೆಯನ್ನು ತಿದ್ದುಪಡಿ ಮಾಡುವ ಅಧಿಕಾರ ರಾಜ್ಯ ಸರ್ಕಾರ ಅಥವಾ ಕೇರಳ ನರ್ಸಿಂಗ್ ಕೌನ್ಸಿಲ್‍ಗೆ ಇಲ್ಲ. ರಾಜ್ಯ ಸರ್ಕಾರ ಮತ್ತು ಆಡಳಿತ ಮಂಡಳಿಗಳು ಸೇರಿಕೊಂಡು ಖಾಸಗಿ ನರ್ಸಿಂಗ್ ಕಾಲೇಜುಗಳಿಗೆ ಮಾನ್ಯತೆ ನೀಡಲು ನಿರಾಕರಿಸಿವೆ ಎಂಬ ಆರೋಪವನ್ನು ನರ್ಸಿಂಗ್ ಸಂಸ್ಥೆಗಳು ಮುಂದಿಟ್ಟಿವೆ. ತಪಾಸಣೆಯ ಲೋಪವನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಲು ಸಂಘಟನೆಗಳು ಮುಂದಾಗಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries