ತಿರುವನಂತಪುರಂ: :2023-24ನೇ ಶೈಕ್ಷಣಿಕ ವರ್ಷದ ಎಸ್ಸೆಸೆಲ್ಸಿ ಪರೀಕ್ಷಾ ಫಲಿತಾಂಶ ಮೇ 8 ರಂದು ಮಧ್ಯಾಹ್ನ 3ಕ್ಕೆ ಪ್ರಕಟಗೊಳ್ಳಲಿದೆ. ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಫಲಿತಾಂಶ ಪ್ರಕಟಿಸಲಿದ್ದಾರೆ. ಕಳೆದ ವರ್ಷ ಮೇ 19ರಂದು ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ ಹನ್ನೊಂದು ದಿನ ಮೊದಲೇ ಫಲಿತಾಂಶ ಪ್ರಕಟವಾಗಲಿದೆ. ಎಸ್ಸೆಸೆಲ್ಸಿ ಪರೀಕ್ಷಾ ಫಲಿತಾಂಶ www.prd.kerala.gov.in, www.result.kerala.gov.in, www.examresults.kerala.gov.in, https://sslcexam.kerala.gov.in, www.results.kite.kerala .gov.in, https://pareekshabhavan.kerala.gov.in ಮತ್ತು ಪಿಆರ್‍ಡಿ ಲೈವ್ ಮೊಬೈಲ್ ಅಪ್ಲಿಕೇಶನ್‍ನಲ್ಲೂ ಲಭ್ಯವಿರುತ್ತದೆ.
2023-24ರ ಶೈಕ್ಷಣಿಕ ವರ್ಷದ ವೊಕೇಶನಲ್ ಹೈಯರ್ ಸೆಕೆಂಡರಿ 2ನೇ ವರ್ಷದ ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ ಮೇ 9 ರಂದು ಮಧ್ಯಾಹ್ನ 3ಕ್ಕೆ ಪ್ರಕಟಗೊಳ್ಳಲಿದೆ. ಕಳೆದ ವರ್ಷ ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶ ಮೇ 25ರಂದು ಪ್ರಕಟಗೊಂಡಿತ್ತು. ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ www.prd.kerala.gov.in,*www.keralaresults.nic.in, *www.result.kerala.gov.in, www.examresults.kerala.gov.in, www.results.kite. kerala.gov.inವೆಬ್‍ಸೈಟ್ ಮತ್ತು ಪಿಆರ್‍ಡಿ ಲೈವ್ ಮೊಬೈಲ್ ಅಪ್ಲಿಕೇಶನ್‍ನಲ್ಲಿ ಲಭ್ಯವಿರಲಿದೆ.
ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ *keralaresults.nic.in, *www.vhse.kerala.gov.in, www.results.kite.kerala.gov.in, www.prd.kerala.gov.in, www.examresults .kerala .gov.in, www.results.kerala.nic.in ವೆಬ್‍ಸೈಟ್ ಹಾಗೂ ಪಿಆರ್‍ಡಿ ಲೈವ್ ಮೊಬೈಲ್ ಅಪ್ಲಿಕೇಶನ್‍ನಲ್ಲಿ ಲಭ್ಯವಿರಲಿದೆ.