ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯಿತಿ ಕಚೇರಿಯೊಳಗೆ ನಾಗರಹಾವು ಸೇರಿಕೊಂಡು ಸಿಬ್ಬಂದಿಯನ್ನು ತಾಸುಗಳ ಕಾಲ ಹೊರಗೆ ಕಾದುನಿಲ್ಲುವಂತೆ ಮಾಡಿದೆ. ಬೆಳಗ್ಗೆ ಎಂದಿನಂತೆ ಸಿಬ್ಬಂದಿ ಆಗಮಿಸಿ ಬಾಗಿಲು ತೆಗೆದು ಒಳ ಹೋಗುವಷ್ಟರಲ್ಲಿ ಕಚೇರಿಯೊಳಗೆ ಹಾವು ಕಾಣಿಸಿಕೊಂಡಿದೆ. ಬೆಚ್ಚಿಬಿದ್ದ ಸಿಬ್ಬಂದಿ ಕಾಸರಗೋಡಿನಿಂದ ಹಾವು ಸೆರೆ ಹಿಡಿಯುವವರನ್ನು ಕರೆಸಿ, ಕೊಂಡೊಯ್ದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ. ಕಚೇರಿ ಸಉತ್ತು ಕುರುಚಲು ಪೊದೆ ಆವರಿಸಿರುವುದಲ್ಲದೆ, ಕಿಟಿಕಿ ಬಾಗಿಲು ಸಮರ್ಪಕವಾಗಿಲ್ಲದಿರುವುದು ಹಾವು ಒಳಪ್ರವೇಶಿಸಲು ಕಾರನವೆನ್ನಲಾಗಿದೆ.