ಕಾಸರಗೋಡು: ಅಶೋಕನಗರ ಶ್ರೀ ಅಯ್ಯಪ್ಪ ಸ್ವಾಮಿ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠೆ ಹಾಗೂ ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರೀ, ನಾಗ, ಗುಳಿಗ ದೈವಗಳ ಪ್ರತಿಷ್ಠಾ ಮಹೋತ್ಸವ ಬುಧವಾರ ಆರಂಭಗೊಂಡಿತು. ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ ಬಂಬ್ರಾಣ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಮಂದಿರದ ವರೆಗೆ ನಡೆಯಿತು. ತಂತ್ರಿವರ್ಯರಿಗೆ ಸವಾಗತ, ವಿವಿಧ ವೈದಿಕ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ, ತಿರುವಾದಿರ, ನೃತ್ಯ ವೈವಿಧ್ಯ ನಡೆಯಿತು. 9ರಂದು ಬೆಳಗ್ಗೆ ಭಜನೆ, ಯೋಗ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು. 10ರಂದು ಬೆಳಗ್ಗೆ 6.25ರಿಂದ 8.23ರ ಮಧ್ಯೆ ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರೀ, ನಾಗ, ಗುಳಿಗ ದೈವಗಳ ಪ್ರತಿಷ್ಠೆ, ಶ್ರೀ ಅಯ್ಯಪ್ಪ ಸ್ವಾಮಿ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠೆ ನಡೆಯುವುದು. 10ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅರಳೀ ವೃಕ್ಷಕ್ಕೆ ವಿಷ್ಣು ಪೂಜೆ ನಡೆಯುವುದು. ಸಂಜೆ 5ಕ್ಕೆ ಧಾರ್ಮಿಕ ಸಭೆ ನಡೆಯುವುದು. ಬ್ರಹ್ಮಶ್ರೀ ವಿಷ್ಣು ಆಸ್ರ ಉಳಿಯ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡುವರು. ವಿದ್ವಾನ್ ನಾಗೇಂದ್ರ ಭಟ್ ಧಾರ್ಮಿಕ ಭಾಷಣ ಮಾಡುವರು. ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ ಬಂಬ್ರಾಣ ದಿವ್ಯ ಉಪಸ್ಥಿತರಿರುವರು.