ಕಾಸರಗೋಡು: ಜಿಲ್ಲೆಯ ಹೋಟೆಲ್‍ಗಳಿಗೆ ಆಹಾರ ಭದ್ರತಾ ವಿಭಾಗ ಅಧಿಕಾರಿಗಳು ದಾಳಿ ನಡೆಸಿ ಎರಡು ಹೋಟೆಲ್‍ಗಳಿಗೆ ದಂಡ ವಿಧಿಸಲಾಗಿದೆ. ಉಳಿಯತ್ತಡ್ಕದ ಚೌಕಿ ರಸ್ತೆ ಹಾಗೂ ಕಾಸರಗೋಡು ರಐಲ್ವೆ ನಿಲ್ದಾಣ ರಸ್ತೆಯ ಎರಡು ಹೋಟೆಲ್‍ಗಳಿಗೆ ಈ ದಂಡ ವಿಧಿಸಲಾಗಿದೆ.
ಶವರ್ಮ ಆಹಾರ ಪದಾರ್ಥ ಮಾರಾಟ ಸಂಸ್ಥೆಗಳನ್ನು ಕೇಂದ್ರೀಕರಿಸಿ ರಾಜ್ಯವ್ಯಾಪಕವಾಗಿ ನಡೆಸಲಾದ ಕಾಯಾಚರಣೆಯನ್ವಯ ಜಿಲ್ಲೆಯ 24ಹೋಟೆಲ್ ಹಾಗೂ ಆಹಾರ ಮಾರಾಟ ಕೇಂದ್ರಗಳಲ್ಲಿ ದಾಳಿ ಆಯೋಜಿಸಲಾಗಿತ್ತು. ಹೋಟೆಲ್, ತಟ್ಟುಕಡ, ಜ್ಯೂಸ್ ಸೆಂಟರ್, ಬೇಕರಿಗಳಿಗೆ ದಾಳಿ ಆಯೋಜಿಸಲಾಗಿದ್ದು, ಶುಚಿತ್ವ ಪಾಲಿಸದ ಸಂಸ್ಥೆಗಳಿಗೆ ದಂಡ ವಿಧೀಸಲಾಗಿದೆ.