ಕುಂಬಳೆ: ಧರ್ಮತ್ತಡ್ಕ ಅಶ್ವತ್ಥಕಟ್ಟೆ ಬಳಿಯ ನಾಗನ ಕಟ್ಟೆಯ ಪ್ರತಿಷ್ಠಾ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿದ್ದು ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.ಇದರ ಆಂಗವಾಗಿ ಗಣಪತಿ ಹವನ,ಆಶ್ವತ್ಥ ಪೂಜೆ,ಪವಮಾನ ಪಾರಾಯಣ,ಭಜನಾ ಸಂಕೀರ್ತನೆ,ನಾಗದೇವತಾ ಪೂಜೆ, ಗೀತಾ ಜ್ಞಾನ ಯಜ್ಞ ಟ್ರಸ್ಟ್ ನವರಿಂದ ಭಗವದ್ಗೀತಾ ಪಾರಾಯಣ ಮತ್ತು ಸಂದೇಶ, ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಗಳ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ವಿದುಷಿ ಲಕ್ಷ್ಮೀ ವಿಶ್ವನಾಥ,ನಿಶಿತಾ ಪಾಣಾಜೆ ಅವರಿಂದ ಭರತನಾಟ್ಯ ಕಾರ್ಯಕ್ರಮಗಳು ಜರಗಿತು. ವಸಂತ ಪಂಡಿತ್ ಧರ್ಮತ್ತಡ್ಕ,ಗೀತಾ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.