ಕಾಸರಗೋಡು: ಸಾವಿತ್ರಿ ಭಾಯಿ ಫುಲೆ ಸ್ಮಾರಕ ವಸತಿ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿಯ ವರೆಗೆ ಕಲಿಯುತ್ತಿರುವ 79 ವಿದ್ಯಾರ್ಥಿಗಳ ಸಮವಸ್ತ್ರವನ್ನು ಹೊಲಿದು ನೀಡಲು ಆಸಕ್ತರಾಗಿರುವ, ಅನುಭವಸ್ಥ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಕೋಟೆಶನ್ ಆಹ್ವಾನಿಸಲಾಗಿದೆ. ಎರಡು ಜತೆ ಸಮವಸ್ತ್ರ ಹೊಲಿದು ಕೊಡಬೇಕು. (ರವಿಕೆ- ಲಂಗ, ಅಂಗಿ-ಚಡ್ಡಿ) ಒಂದು ಜತೆಗೆ ಹೊಲಿದು ನೀಡಲಿರುವ ದರಗಳನ್ನು ಬೇರೆ ಬೇರೆಯಾಗಿ ನಮೂದಿಸಿ ನಿಯಮಬದ್ಧವಾದ ಕೊಟೇಶನ್ ಮೇ 21 ಮಧ್ಯಾಹ್ನ 3 ಗಂಟೆಯ ಮೊದಲು ಕಚೇರಿಯಲ್ಲಿ ನೀಡಬೇಕು. ಮಧ್ಯಾಹ್ನ 3.30ಕ್ಕೆ ಕೊಟೇಶನ್ ತೆರೆಯಲಾಗುವುದು.
ಸಾವಿತ್ರಿ ಭಾಯಿ ಫುಲೆ ಸ್ಮಾರಕ ವಸತಿ ಶಾಲೆಯಲ್ಲಿ ತಿಂಗಳಿಗೊಮ್ಮೆ ಶಾಲೆ ಯಾ ಹಾಸ್ಟೆಲ್‍ನಲ್ಲಿರುವ 200 ಮಕ್ಕಳ ಕೂದಲು ಕತ್ತರಿಸಲು ಆಸಕ್ತ ವ್ಯಕ್ತಿಗಳಿಂದ ಯಾ ಸಂಸ್ಥೆಗಳಿಂದ ಕೋಟೀಶನ್ ಆಹ್ವಾನಿಸಿದೆ. ಕೋಟೀಶನ್ ಮೇ 21 ರಂದು ಮಧ್ಯಾಹ್ನ 3 ಗಂಟೆಗೆ ಮೊದಲು ಕಚೇರಿಗೆ ನೀಡಬೇಕು. ಮಧ್ಯಾಹ್ನ 3.30ಕ್ಕೆ ಕೊಟೇಶನ್ ತೆರೆದು ಪರಿಶೀಲಿಸಲಾಗುತ್ತದೆ. ಈ ಕೊಟೇಶನ್ ಗಳಲ್ಲಿ ಕಡಿಮೆ ದರ ನಮೂದಿಸಲಾಗಿರುವವುಗಳನ್ನು ಸ್ವೀಕರಿಸಲಾಗುತ್ತದೆ. ಪ್ರತಿ ಮಗುವಿನ ಕೂದಲು ಕತ್ತರಿಸಲು ಬರುವ ದರವನ್ನು ಕೊಟೀಶನ್‍ನಲ್ಲಿ ನಮೂದಿಸಬೇಕು.
ಸಾವಿತ್ರಿ ಭಾಯಿ ಫುಲೆ ಸ್ಮಾರಕ ವಸತಿ ಶಾಲೆಯಲ್ಲಿ 1 ರಿಂದ 8 ನೇ ತರಗತಿಯ ವರೆಗೆ ಕಲಿಯುತ್ತಿರುವ 200 ಮಕ್ಕಳಿಗೆ ಒಂದು ಜತೆ ಚಪ್ಪಲಿ ಪೂರೈಸಲು ಸಿದ್ಧರಿರುವ ವ್ಯಕ್ತಿಗಳು ಯಾ ಸಂಸ್ಥೆಗಳಿಂದ ಕೊಟೇಶನ್ ಆಹ್ವಾನಿಸಿದೆ. ಗಂಡು ಮತ್ತು ಹೆಣ್ಣು ಮಕ್ಕಳ ಚಪ್ಪಲಿಗಳ ದರವನ್ನು ಪ್ರತ್ಯೇಕವಾಗಿ ದಾಖಲಿಸುವುದರ ಜೊತೆಗೆ ಮಾದರಿಯನ್ನು ನೀಡಬೇಕು. ಕೊಟೇಶನ್ ಸ್ವೀಕರಿಸುವ ಕೊನೆಯ ದಿನಾಂಕ ಮೇ 21 ಮಧ್ಯಾಹ್ನ 3 ಗಂಟೆ ಆಗಿದ್ದು, ಮಧ್ಯಾಹ್ನ 3.30ಕ್ಕೆ ಕೊಟೇಶನ್ ತೆರೆಯಲಾಗುವುದು.
ಸಾವಿತ್ರಿ ಭಾಯಿ ಫುಲೆ ಸ್ಮಾರಕ ಆಶ್ರಮ ಶಾಲೆಯ 2024-25 ನೇ ಶೈಕ್ಷಣಿಕ ವರ್ಷದಲ್ಲಿ 1 ರಿಂದ 8 ನೇ ತರಗತಿಯ ವರೆಗೆ ವಸತಿಗೃಹದಲ್ಲಿ ನಿಂತು ಓದುತ್ತಿರುವ 200 ಮಕ್ಕಳಿಗೆ ತಲಾ ಒಂದು ಬೆಡ್ ಶೀಟ್ ಮತ್ತು ಬೈರಾಸು ಪೂರೈಸಲು ಅಧಿಕೃತ ಸಂಸ್ಥೆ ಯಾ ವ್ಯಕ್ತಿಗಳಿಂದ ನಿಯಮಬದ್ಧವಾದ ಕೊಟೇಶನ್ ಆಹ್ವಾನಿಸಲಾಗಿದೆ. ಮೇ 21 ರಂದು ಸಂಜೆ 4ರ ವರೆಗೆ ಕಛೇರಿಯಲ್ಲಿ ಕೊಟೇಶನ್ ಸ್ವೀಕರಿಸಿ, ಸಂಜೆ 4.30ಕ್ಕೆ ಕೊಟೇಶನ್ ತೆರೆಯಲಾಗುವುದು.
ಶಾಲಾ ಹಾಸ್ಟೆಲ್‍ನಲ್ಲಿ 2024-25 ನೇ ಶೈಕ್ಷಣಿಕ ವರ್ಷದಲ್ಲಿ 1 ರಿಂದ 8 ನೇ ತರಗತಿಯ ವರೆಗೆ ವಸತಿಗೃಹದಲ್ಲಿ ಇದ್ದು ಕಲಿಯುತ್ತಿರುವ ಮಕ್ಕಳ ಬಟ್ಟೆಗಳನ್ನು (ಸಮವಸ್ತ್ರ, ನೈಟ್‍ಡ್ರೆಸ್, ಬೆಡ್ ಶೀಟ್, ದಿಂಬಿನ ಕವರ್ ಮತ್ತು ಹೊದಿಕೆ) ಜೂನ್ 2024 ರಿಂದ ಮಾರ್ಚ್ 2025 ರವರೆಗೆ ಒಗೆದು ಒಣಗಿಸಿ ಮತ್ತು ಇಸ್ತ್ರಿ ಮಾಡಿ ನೀಡಲು ಆಸಕ್ತ ವ್ಯಕ್ತಿ ಯಾ ಸಂಸ್ಥೆಗಳಿಂದ ಕೊಟೇಶನ್ ಆಹ್ವಾನಿಸಲಾಗಿದೆ. ಕೊಟೇಶನ್ ಮೇ 21ರ ಮಧ್ಯಾಹ್ನ 3 ಗಂಟೆಯ ಮೊದಲು ಕಚೇರಿಗೆ ತಲುಪಬೇಕು. ಮಧ್ಯಾಹ್ನ 3.30ಕ್ಕೆ ಅವುಗಳನ್ನು ತೆರೆದು ಪರಿಶೀಲಿಸಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ (04994290922)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.