ಕಣ್ಣೂರು: ಅಂಗನವಾಡಿಯಲ್ಲಿ ಕುದಿವ ಹಾಲು ಕುಡಿದು ತೀವ್ರವಾಗಿ ಸುಟ್ಟು ಗಾಯಗೊಂಡ ವಿಶೇಷ ಚೇತನ ಬಾಲಕ ಆಸ್ಪತ್ರೆಗೆ ದಾಖಲಾದ ಘಟನೆಯಲ್ಲಿ ಅಂಗನವಾಡಿ ನೌಕರೆಯ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಶೀಬಾ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಬಿಸಿ ಬಿಸಿ ಹಾಲನ್ನು ಬಾಯಿಗೆ ಸುರಿದುಕೊಂಡು ತೀವ್ರ ನಿಗಾದಲ್ಲಿ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವನೆಂದು ಮಗುವಿನ ಸಂಬಂಧಿಕರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕೋಝಿಕ್ಕೋಡ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಆಹಾರ ಮತ್ತು ನೀರನ್ನು ಸೇವಿಸಲು ಸಾಧ್ಯವಾಗದೆ ವಿಶೇಷ ಚೇತನ ಮಗು ಚಿಕಿತ್ಸೆಯಲ್ಲಿದ್ದಾನೆ. ಮಗು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಹುಟ್ಟಿನಿಂದಲೇ ಮಾತಿಲ್ಲದ ಮಗು ಚಿಕಿತ್ಸೆ ಪಡೆಯುತ್ತಿದೆ. ಬಾಯಿಯ ಸುತ್ತಲಿನ ಚರ್ಮವು ಸುಟ್ಟುಹೋಗಿದೆ.
ಪಿಣರಾಯಿ 18ನೇ ವಾರ್ಡಿನ ಕೋಲಾಡ್ ಅಂಗನವಾಡಿಯಲ್ಲಿ ಕಳೆದ 7ರಂದು ಘಟನೆ ನಡೆದಿದೆ. ಬಾಯಿ ಸುಟ್ಟು ಕರಕಲಾದ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಶಿಕ್ಷಕಿ ಮತ್ತು ಸಹಾಯಕಿ ಆಸಕ್ತಿ ವಹಿಸಿಲ್ಲ ಎಂದು ತಾಯಿ ಆರೋಪಿಸಿದ್ದಾರೆ.