ತಿರುವನಂತಪುರಂ: ತಮ್ಮನ್ನು ಮತ್ತು ಕರ್ನಾಟಕ ಸರ್ಕಾರವನ್ನು ಕೆಳಗಿಳಿಸಲು ಕರ್ನಾಟಕದ ಕೆಲವರು ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ ನೀಡಿದ್ದಾರೆ ಎಂಬ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಕೇರಳ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ತಿರುಗೇಟು ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಮಾಡಿರುವ ಆರೋಪ ಕೇರಳದಲ್ಲಿ ನಡೆಯುವ ಸಾಧ್ಯತೆ ಕಡಮೆ ಎಂದು ಸಚಿವ ಕೆ.ರಾಧಾಕೃಷ್ಣನ್ ಮಾಹಿತಿ ನೀಡಿದ್ದಾರೆ.
ಕೇರಳದ ರಾಜರಾಜೇಶ್ವರ ದೇವಸ್ಥಾನದ ಬಳಿ ನಡೆದ ಶತ್ರುಭೈರವ ಯಾಗದಲ್ಲಿ 52 ಪ್ರಾಣಿಗಳನ್ನು ಬಲಿ ಕೊಡಲಾಗಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಕಣ್ಣೂರಿನಲ್ಲಿ ಪ್ರಾಣಿಬಲಿ ನಡೆದಿದೆ ಎಂಬ ವದಂತಿ ಹಬ್ಬಿತ್ತು, ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿದುಬಂದಿದೆ.
ಕಣ್ಣೂರಿನಲ್ಲಿ ಇಂತಹ ಬಲಿ ನಡೆದಿದೆ ಎಂಬ ಮಾತು ಕೇಳಿಬರುತ್ತಿದ್ದರೂ ತಳಿಪರಂಬದ ರಾಜರಾಜೇಶ್ವರ ದೇವಸ್ಥಾನದಲ್ಲಿ ಪ್ರಾಣಿ ಬಲಿ ಪೂಜೆ ನಡೆಯುತ್ತಿಲ್ಲ. ಆದರೆ ಮಾಡಾಯಿ ದೇವಸ್ಥಾನವು ಶತ್ರುಹರ ಪೂಜೆಗೆ ಪ್ರಸಿದ್ಧವಾಗಿದೆ.