ಮಧೂರು: ಸಮಾಜದ ಕೆಳ ಸ್ತರದ ಜನರನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನವನ್ನು ಬಂಟರ ಸಂಘಗಳು ಮಾಡಬೇಕಾಗಿದೆ ಎಂದು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಧೂರು ಬಂಟರ ಸಮಿತಿ ವತಿಯಿಂದ ಮಧೂರಿನ ಪರಕ್ಕಿಲದಲ್ಲಿ ಸಂಘದ ನೂತನ ಮಾನಕ್ಕು -ಕೊರಗಪ್ಪ ಆಳ್ವ ಕಾರ್ಯಾಲಯ ಭವನದ ಉದ್ಘಾಟನೆ ಹಾಗೂ ಬಯಲು ರಂಗ ಮಂದಿರದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ಬಂಟರ ಸಂಘದ ಸದಾನಂದ ಸುಲಾಯ ಕಾರ್ಯಾಲಯ ಭವನ ಉದ್ಘಾಟಿಸಿದರು. ಚಲನಚಿತ್ರ ನಟ ಹಾಗೂ ಪ್ರಶಸ್ತಿ ವಿಜೇತ ನಿರ್ದೇಶಕ ಶಿವಧ್ವಜ ಶೆಟ್ಟಿ ಬಯಲು ರಂಗ ಮಂದಿರವನ್ನು ಲೋಕಾರ್ಪಣೆಗೊಳಿಸಿದರು. ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರುಗುತ್ತು ಅಧ್ಯಕ್ಷತೆ ವಹಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ನಾಟಿ ವೈದ್ಯೆ ಯಮುನಾ ಎಸ್.ಶೆಟ್ಟಿ ಕುದ್ರೆಪ್ಪಾಡಿಗುತ್ತು, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಕುದ್ರೆಪ್ಪಾಡಿ ಗುತ್ತು ಮಹಾಬಲ ಶೆಟ್ಟಿ, ಶ್ಯಾಮಲಾ ಎಂ.ಶೆಟ್ಟಿ ಅತಿಥಿಗಳನ್ನು ಶಾಲು ಹೊದೆಸಿ ಸ್ವಾಗತಿಸಿದರು.
ವಕೀಲರುಗಳಾದ ಸದಾನಂದ ರೈ, ಮಹಾಬಲ ಶೆಟ್ಟಿ ಕೂಡ್ಲು, ನಿವೃತ್ತ ಮುಖ್ಯ ಶಿಕ್ಷಕ ಎಸ್.ಎನ್. ರಾಮ ಶೆಟ್ಟಿ ಶಿರಿಬಾಗಿಲು ಶುಭ ಹಾರೈಸಿ ಮಾತನಾಡಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಪ್ರಶಸ್ತಿ ವಿಜೇತ ಪತ್ರಕರ್ತ ರಾಜೇಶ್ ರೈ ಚಟ್ಲ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ಮದನ ರೈ ಅವರನ್ನು ಸಮ್ಮಾನಿಸÀಲಾಯಿತು. ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡ್ ಸಮ್ಮಾನಿತರನ್ನು ಪರಿಚಯಿಸಿದರು. ಡಾ.ವಿದ್ಯಾ ಮೋಹನದಾಸ್ ರೈ, ಬಂಟರ ಸಂಸ್ಕøತಿ, ಸಂಪ್ರದಾಯ ಕುರಿತು ಉಪನ್ಯಾಸ ನೀಡಿದರು. ಅಶೋಕ್ ರೈ ಸೂರ್ಲು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಧೂರು ಬಂಟರ ಸಂಘದ ನೂತನ ಕಾರ್ಯಾಲಯ ಭವನ, ಬಯಲು ರಂಗ ಮಂದಿರದ ನಿರ್ಮಾಣಕ್ಕೆ ಸಹಾಯ, ಸಹಕಾರ ನೀಡಿದ ಹಲವು ಮಹನೀಯರು ಮತ್ತು ಮಾತೆಯರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಂಟರ ಸಂಘದ ವಿವಿಧ ಘಟಕಗಳ ಅಧ್ಯಕ್ಷರುಗಳಾದ ಬಾಬು ರೈ ಗಂಗೆ ಕೂಡ್ಲು, ನಾರಾಯಣ ಶೆಟ್ಟಿ, ಶಿರಿಬಾಗಿಲು. ಬಾಲಕೃಷ್ಣ ಮಧೂರು, ಪುರಂದರ ಶೆಟ್ಟಿ ಮಾಯಿಪ್ಪಾಡಿ ಉಪಸ್ಥಿತರಿದ್ದರು. ರೋಹಿತಾಕ್ಷಿ ಬಿ.ರೈ ಟೀಚರ್ ಕಾರ್ಯಕ್ರಮ ನಿರೂಪಿಸಿದರು ಜಯಲಕ್ಷ್ಮಿ ಅಡಪ, ಚಿತ್ರಲೇಖ ರೈ ಲೀಲಾವತಿ ಎಸ್.ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ಶೆಟ್ಟಿ ವಂದಿಸಿದರು.