ಮುಳ್ಳೇರಿಯ: ಪೆರಿಯ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಕ ನಟನಂ ರಾಷ್ಟ್ರೀಯ ನೃತ್ಯೋತ್ಸವದದ ಸಂದರ್ಭದಲ್ಲಿ ಚೆನ್ನೈನ ಖ್ಯಾತ ನೃತ್ಯಗಾರ್ತಿ ಅಪರ್ಣಾ ಶರ್ಮಾ ಅವರು ಮೂರು ದಿನಗಳ ಭರತನಾಟ್ಯ ಕಾರ್ಯಾಗಾರವನ್ನು ನಡೆಸಿಕೊಡುತ್ತಿದ್ದಾರೆ. ಗುರುವಾಯೂರ್‍ನ ಗೀತಾ ಶರ್ಮಾ ಅವರ ತಿರುವಾತಿರ ಅಧ್ಯಯನ ಶಿಬಿರವನ್ನೂ ಆರಂಭಿಸಲಾಯಿತು. ನೃತ್ಯಗಾರರಿಗೆ ವೇದಿಕೆಯನ್ನು ಹೊಂದಿಸಿ, ಕಲಾಸಕ್ತರಿಗೆ ವಿವಿಧ ಶೈಲಿಯ ನಾಟ್ಯ ಕಲೆಗಳನ್ನು ಪರಿಚಯಿಸಿ, ನೃತ್ಯದ ವಿವಿಧ ಪ್ರಕಾರಗಳ ಬಗ್ಗೆ ಜ್ಞಾನವನ್ನು ನೀಡುವುದು ವೈಶಾಖ ನಟನಂನ ಉದ್ದೇಶವಾಗಿದೆ.
ಎರಡನೇ ದಿನ ಬುಧವಾರ ಕರ್ನಾಟಕದ ಅರ್ಪಿತಾ ಹೆಗ್ಡೆ ಮತ್ತು ಅದಿತಿ ಅಖಿಲ್ ಅವರಿಂದ ಭರತನಾಟ್ಯ, ನಯನಾ ನಾರಾಯಣ್, ಅಶ್ವತಿ ಕೃಷ್ಣ ಮತ್ತು ಕಲಾಮಂಡಲಂ ಕೃಷ್ಣಪ್ರಿಯ ಅವರಿಂದ ಭರತನಾಟ್ಯ ಮತ್ತು ಯೋಗಕ್ಷೇಮ ಉಪಸಭಾ ಕಾಞಂಗಾಡ್ ಮತ್ತು ಅಲ್ಕೋಡು ಗ್ರಾಮಸ್ಥರಿಂದ ತಿರುವಾತಿರ ನಡೆಯಿತು. ಗುರುವಾರ ಕುಮಾರಿ ಶ್ರೀಲತಾ, ಅದಿತಿ ಲಕ್ಷ್ಮಿ ಭಟ್, ಮಹತಿ ಸಾಗರ, ಬೆಂಗಳೂರು `ನಟನಾತರಂಗಿಣಿ'ಯ ವಿದ್ಯಾರ್ಥಿಗಳು ಮತ್ತು ನಾಟ್ಯ ನಿಲಯ ಮಂಜೇಶ್ವರ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆದವು.