ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 33ನೇ ಪುಣ್ಯತಿಥಿ, ಪುಷ್ಪಾರ್ಚನೆ ಕಾರ್ಯಕ್ರಮದೊಮದಿಗೆ ಬದಿಯಡ್ಕ ಮಂಡಲ ಕಚೇರಿಯಲ್ಲಿ ನಡೆಯಿತು.
ಕಾಂಗ್ರೆಸ್ಸ್ ಹಿರಿಯ ನೇತಾರ ಪಿ.ಜಿ. ಚಂದ್ರಹಾಸ ರೈ ಪುμÁ್ಪರ್ಚನೆ ಮಾಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ರಾಜೀವ್ ಗಾಂಧೀಜಿಯವರು ದೇಶ ಕಂಡ ಅಪ್ರತಿಮ ನೇತಾರರಾಗಿದ್ದರು. ತಂತ್ರಜ್ಞಾನದ ಮೂಲಕ ಭಾರತದ ಕೊಡುಗೆಯನ್ನು ವಿಶ್ವಕ್ಕೆ ಪರಿಚಯಿಸಿದ ಧೀಮಂತ ಪ್ರಧಾನಿ. ಅವರು ಹಾಕಿಕೊಟ್ಟ ಭದ್ರ ಬುನಾದಿ ದೇಶಕ್ಕೆ ಇಂದು ಅಡಿಪಾಯವಾಗಿದೆ ಎಂದರು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಕುಂಜಾರ್ ಮಹಮ್ಮದ್ ಹಾಜಿ, ನಾರಾಯಣ. ಎಂ, ಗಂಗಾಧರ ಗೋಳಿಯಡ್ಕ, ಶಾಫಿ ಗೋಳಿಯಡ್ಕ, ಚಂದ್ರಹಾಸ ಮಾಸ್ತರ್, ಮಂಡಲ ಪದಾಧಿಕಾರಿಗಳಾದ ಜಗನ್ನಾಥ ರೈ ಪೆರಡಾಲ, ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್, ಗೋಪಾಲ ದರ್ಬೆತ್ತಡ್ಕ, ರಾಮ ಪಟ್ಟಾಜೆ, ಲೋಹಿತಾಕ್ಷ ಪಟ್ಟಾಜೆ, ಕೃಷ್ಣದಾಸ್ ದರ್ಬೆತ್ತಡ್ಕ, ಸಿರಿಲ್ ಡಿಸೋಜ, ವಾರ್ಡ್ ಸದಸ್ಯೆ ಅನಸೂಯ ಮಾನ್ಯ, ಐಎನ್‍ಟಿಯು ಸಿ ಮಂಡಲ ಅಧ್ಯಕ್ಷ ರಾಮಕೃಷ್ಣ ವಿದ್ಯಾಗಿರಿ, ಸುಂದರ, ಯುವ ಕಾಂಗ್ರೆಸ್ಸ್ ಪದಾಧಿಕಾರಿಗಳಾದ ಶ್ರೀನಾಥ್, ಶಾಫಿ ಪಯ್ಯಲಡ್ಕ, ವಾರ್ಡ್ ಪದಾಧಿಕಾರಿಗಳು, ಬೂತ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಮಂದಿನ ಸ್ಥಳೀಯಾಡಳಿತ ಚುನಾವಣೆಗೆ ಬದಿಯಡ್ಕದಲ್ಲಿ ಕಾಂಗ್ರೆಸನ್ನು ತಳ ಮಟ್ಟದಲ್ಲಿ ಬಲಪಡಿಸಲು ಕರೆ ನೀಡಲಾಯಿತು.