ಮಂಗಳೂರು: ನ್ಯಾಚುರನ್ಸ್ ಐಸ್‍ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ಅವರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು. ಅವರಿಗೆ 75 ವರ್ಷ ವಯಸ್ಸಾಗಿತ್ತು ಎಂದು ಕಂಪನಿ ಆನ್‍ಲೈನ್ ಪೋಸ್ಟ್ ನಲ್ಲಿ ಹೇಳಿದೆ.
ಮಂಗಳೂರು: ನ್ಯಾಚುರನ್ಸ್ ಐಸ್‍ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ಅವರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು. ಅವರಿಗೆ 75 ವರ್ಷ ವಯಸ್ಸಾಗಿತ್ತು ಎಂದು ಕಂಪನಿ ಆನ್‍ಲೈನ್ ಪೋಸ್ಟ್ ನಲ್ಲಿ ಹೇಳಿದೆ.
"ನಮ್ಮ ಪೋಷಕರೂ, ನ್ಯಾಚುರರ್ಸ್ ಐಸ್‍ಕ್ರೀಂನ ಸಂಸ್ಥಾಪಕರೂ ಆದ ರಘುನಂದನ್ ಕಾಮತ್ ಅವರ ಅಗಲುವಿಕೆಯನ್ನು ತಿಳಿಸಲು ನಮಗೆ ಅತೀವ ಬೇಸರವಾಗುತ್ತಿದೆ.
ಮಂಗಳೂರಿನ ಗ್ರಾಮದಲ್ಲಿ ತಂದೆಗೆ ಮಾವಿನಹಣ್ಣು ಮಾರಾಟದಲ್ಲಿ ನೆರವಾಗುತ್ತಾ ಬೆಳೆದ ಕಾಮತ್, ಈ ವ್ಯವಹಾರದಲ್ಲಿ ಮಾವಿನಹಣ್ಣು ಕೀಳುವ, ಆಯ್ಕೆ ಮಾಡುವ, ವಿಂಗಡಿಸುವ ಹಾಗೂ ಸಂರಕ್ಷಿಸುವ ಕಲೆಯನ್ನು ಕರಗತ ಮಾಡಿಕೊಂಡರು. 14ನೇ ವಯಸ್ಸಿನಲ್ಲಿ ಅಣ್ಣನ ಉಪಾಹಾರಗೃಹದಲ್ಲಿ ಸೇರಿಕೊಂಡು ನೈಜ ಹಣ್ಣಿನ ಪಲ್ಪ್ ಬಳಸಿ ಒಳ್ಳೆಯ ಐಸ್‍ಕ್ರೀಂ ತಯಾರಿಸುವ ಕನಸು ಕಂಡರು.
1984ರಲ್ಲಿ ಮುಂಬೈಗೆ ತೆರಳಿ ಆರು ಮಂದಿ ಸಿಬ್ಬಂದಿಯೊಂದಿಗೆ ಮೊದಲ ಐಸ್‍ಕ್ರೀಂ ಪಾರ್ಲರ್ ತೆರೆದರು. ಜುಹುಸ್ಕೀಂ ಉಪನಗರದಲ್ಲಿ 12 ಪರಿಮಳಗಳ ಐಸ್‍ಕ್ರೀಂ ಮಾರಾಟ ಆರಂಭಿಸಿದರು. ಬೇಡಿಕೆ ಹೆಚ್ಚುತ್ತಾ ಹೋದಂತೆ 1994ರಲ್ಲಿ 5 ಮಳಿಗೆಗಳನ್ನು ತೆರೆದರು. ಪ್ರಸ್ತುತ 15 ನಗರಗಳಲ್ಲಿ 165ಕ್ಕೂ ಹೆಚ್ಚು ಮಳಿಗೆಗಳನ್ನು ಇವರ ಕಂಪನಿ ಹೊಂದಿದೆ.
ತಾಯಿಯಿಂದ ತಂತ್ರಕೌಶಲಗಳನ್ನ ಪಡೆದು, ಉತ್ಪಾದನೆಯನ್ನು ಮುಖ್ಯವಾಹಿನಿಗೆ ತರಲು ಮತ್ತು ನಿರಂತರತೆಯನ್ನು ಖಾತರಿಪಡಿಸಲು ವಿನೂತನ ಯಂತ್ರಗಳನ್ನು ಅವರು ಅಭಿವೃದ್ಧಿಪಡಿಸಿದರು ಎಂದು ಕಂಪನಿ ವೆಬ್‍ಸೈಟ್ ಹೇಳಿದೆ.