ಮಧೂರು: ಬಂಟರ ಸಮಿತಿ ಮಧೂರು ಇದರ ಪಂಚಾಯತಿ ಸಮಾವೇಶ ನೂತನ ಕಾರ್ಯಾಲಯದ ಉದ್ಘಾಟನೆ ಹಾಗೂ ತೆರೆದ ರಂಗ ಮಂದಿರದ ಲೋಕಾರ್ಪಣೆ ಸಮಾರಂಭ ಇಂದು( ಮೇ 12) ಬೆಳಗ್ಗೆ ಮಧೂರು ಸಮೀಪದ ಪರಕ್ಕಿಲದಲ್ಲಿ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿರುವುದು.
ಬೆಳಗ್ಗೆ 11 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿರುವುದು. ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಸುವರು. ಮಧೂರು ಸಮಿತಿ ಬಂಟರ ಸಂಘದ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಬಂಟರ ಸಂಘದ ಶೈಕ್ಷಣಿಕ ಸಾಂಸ್ಕøತಿಕ ವಿಭಾಗ ಸಂಚಾಲಕ ಸದಾನಂದ ಸುಲಾಯ, ಚಲನಚಿತ್ರ ನಟ, ನಿರ್ದೇಶಕ, ಸೀರಿಯಲ್ ನಟ ಶಿವಧ್ವಜ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಸುಬ್ಬಣ್ಣ ರೈ, ಪ್ರಶಸ್ತಿ ವಿಜೇತ ಪತ್ರಕರ್ತ, ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮದನ ರೈ ಅವರನ್ನು ಸಮಾರಂಭದಲ್ಲಿ ಗೌರವಿಸಿ ಸಮ್ಮಾನಿಸಲಾಗುವುದು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ.ಸುಬ್ಬಯ್ಯ ರೈ, ಮಾಜಿ ಅಧ್ಯಕ್ಷ ನ್ಯಾಯವಾದಿ ಎ.ಸದಾನಂದ ರೈ, ನ್ಯಾಯವಾದಿ ಕೆ.ಮಹಾಬಲ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ, ಬಂಟರ ಸಂಘದ ಹಿರಿಯ ಕಾರ್ಯಕರ್ತ ಎಸ್.ಎನ್.ರಾಮ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು
ಬಂಟರ ಸಂಸ್ಕøತಿ ಸಂಪ್ರದಾಯಗಳ ಕುರಿತು ಡಾ.ವಿದ್ಯಾ ಮೋಹನದಾಸ್ ರೈ ವಿಶೇಷ ಉಪನ್ಯಾಸ ನೀಡುವರು. ಕಾಸರಗೋದು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡ್ ಸಮ್ಮಾನಿತರನ್ನು ಪರಿಚಯಿಸುವರು.