ಲಾಹೋರ್: ಮಾನವ ಕಳ್ಳಸಾಗಣೆಯ ಜಾಲಕ್ಕೆ ಸಿಲುಕಿ, ಕಳೆದ ವರ್ಷ ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಭಾರತದ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ವಯಸ್ಸಿನ ಮಗನನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನವರಿಗೆ ಬುಧವಾರ ವಾಘಾ ಗಡಿಯಲ್ಲಿ ಹಸ್ತಾಂತರಿಸಲಾಗಿದೆ.

ಅಕ್ರಮ ಪ್ರವೇಶದ ಕಾರಣಕ್ಕೆ ಕ್ವೆಟಾ ಜೈಲಿನಲ್ಲಿ ಒಂದು ವರ್ಷ ಶಿಕ್ಷೆಯನ್ನು ಪೂರೈಸಿದ ನಂತರ ಮಹಿಳೆ ಹಾಗೂ ಆತನ ಪುತ್ರನನ್ನು ಭಾರತದ ವಶಕ್ಕೆ ಒಪ್ಪಿಸಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
ಅಸ್ಸಾಂನ ನಗಾಂವ್ ನಗರದ ವಹೀದಾ ಬೇಗಂ ಹಾಗೂ ಅವರ ಮಗ ಫೈಜ್ ಎಂಬುವವರೇ ಶಿಕ್ಷೆ ಅನುಭವಿಸಿದವರು.
'ಕಳೆದ ವರ್ಷ ಭಾರತದ ಏಜೆಂಟ್ ಒಬ್ಬ ಕೆನಡಾಗೆ ಕೊಂಡೊಯ್ಯುವುದಾಗಿ ನನ್ನನ್ನು ನಂಬಿಸಿದ್ದ. ಆತನೇ ನನ್ನನ್ನು ಹಾಗೂ ಮಗನನ್ನು ದುಬೈಗೆ ಕರೆದೊಯ್ದಿದ್ದ. ಅಲ್ಲಿಂದ ಅಫ್ಗಾನಿಸ್ತಾನಕ್ಕೆ ಪ್ರಯಾಣ ಮಾಡಿದ್ದೆವು. ಅಲ್ಲಿ ನಮ್ಮ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡು, ಹಣವನ್ನೂ ಪಡೆದು ಪರಾರಿಯಾಗಿದ್ದ. ಚಮನ್ ಗಡಿ ದಾಟಿ, ಪಾಕಿಸ್ತಾನ ಪ್ರವೇಶಿಸಿದೆವು. ಅಲ್ಲಿಂದ ಹೇಗಾದರೂ ಮಾಡಿ ಭಾರತ ತಲುಪಬಹುದು ಎಂದುಕೊಂಡಿದ್ದೆವು. ಪೊಲೀಸರು ಅಲ್ಲಿ ಬಂಧಿಸಿದರು' ಎಂದು ವಹೀದಾ ಪಾಕಿಸ್ತಾನದ ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದರು.
2022ರಲ್ಲಿ ಪತಿಯ ಮರಣದ ನಂತರ ಜಮೀನು ಮಾರಿ, ಆ ಹಣವನ್ನು ಏಜೆಂಟ್‌ಗೆ ಕೊಟ್ಟಿದ್ದಾಗಿಯೂ ಅವರು ಉಲ್ಲೇಖಿಸಿದ್ದರು.