ಮಾಯಿಪ್ಪಾಡಿ ಡಯೆಟ್:
ಮಾಯಿಪ್ಪಾಡಿಯ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರ'ಡಯಟ್' ನಲ್ಲಿ ಯು ಪಿ ಎಸ್ ಟಿ (ಕನ್ನಡ 2), ಜೂನಿಯರ್ ಲಾಂಗ್ವೇಜ್ ಅರಬಿಕ್ ( ಅರೆಕಾಲಿಕ-1) ಹುದ್ದೆಗಳಿಗೆ ದಿನವೇತನದ ಆಧಾರದಲ್ಲಿ ನೇಮಕಾತಿ ನಡೆಯಲಿದೆ.
ಜೂನ್ 1ರಂದು ಬೆಳಗ್ಗೆ 10.30 ಕ್ಕೆ ಮಾಯಿಪ್ಪಾಡಿ ಡಯಟ್ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಆಸಕ್ತ ಯೋಗ್ಯ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 240323)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವೊಕೇಶನಲ್ ಹೈಯರ್ ಸೆಕೆಂಡರಿ:
ಕಾಸರಗೋಡು ನೆಲ್ಲಿಕುಂಜೆ ಬಾಲಕಿಯರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಪ್ರೌಢಶಾಲಾ ವಿಭಾಗದಲ್ಲಿ ಗಣಿತ (ಕನ್ನಡ ಮಾಧ್ಯಮ) , ಸಂಸ್ಕøತ (ಅರೆಕಾಲಿಕ) , ಕನ್ನಡ (ಅರೆಕಾಲಿಕ) ವಿಷಯಗಳಲ್ಲಿ ತೆರವಾಗಿರುವ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗಾಗಿ ಸಂದರ್ಶನ ಜೂ. 1ರಂದು ಬೆಳಗ್ಗೆ 10ಕ್ಕೆ ಶಾಲಾ ಕಚೇರಿಯಲ್ಲಿ ನಡೆಯಲಿರುವುದು. ಅರ್ಹ ಅಭ್ಯರ್ಥಿಗಳು ಅಸಲಿ ದಾಖಲೆಯೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.