ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ, ಗುಜರಾತ್ ನ ಮಾಜಿ ರಾಜ್ಯಪಾಲರಾದ ಕಮಲಾ ಬೆನಿವಾಲ್ ನಿಧನರಾದರು. ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ಕಮಲಾ ಬೆನಿವಾಲ್ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.
ದೀರ್ಘಾವಧಿಯ ಅನಾರೋಗ್ಯದ ಕಾರಣ ಬೆನಿವಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಗುರುವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಗುಜರಾತ್ ಅಷ್ಟೇ ಅಲ್ಲದೇ ಮಿಜೊರಾಮ್ ತ್ರಿಪುರಾಗಳ ರಾಜ್ಯಪಾಲರಾಗಿಯೂ, ರಾಜಸ್ಥಾನದ ಡಿಸಿಎಂ ಆಗಿಯೂ ಬೆನಿವಾಲ್ ಕಾರ್ಯನಿರ್ವಹಿಸಿದ್ದರು.