ಬದಿಯಡ್ಕ: ಕನ್ನೆಪ್ಪಾಡಿಯ ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿಯಲ್ಲಿ ತುಲು ಲಿಪಿ ನಾಮಫಲಕವನ್ನು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅನಾವರಣಗೊಳಿಸಿ ಆಶೀರ್ವದಿಸಿದರು. ಜೈ ತುಲುನಾಡ್ (ರಿ.) ಸಂಘಟನೆಯು ತುಲು ಲಿಪಿ, ಭಾóಷೆ ಮತ್ತು ಸಾಹಿತ್ಯದ ಬಗ್ಗೆ ನಡೆಸುತ್ತಿರುವ ಹಲವಾರು ಚಟುವಟಿಕೆಗಳು ಹಾಗು ತುಲು ಲಿಪಿ ನಾಮಫಲಕದ ಅಭಿಯಾನ ಸ್ತುತ್ಯರ್ಹ ಎಂದರು.
ಕೊಡ್ಯಮ್ಮೆ ಅಂತಲ ಶ್ರೀಮೊಗೇರ ಚಾವಡಿ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ಮಹೇಶ್ ಶಾಂತಿ ಹೆಜಮಾಡಿ, ದೈವಜ್ಞರಾದ ಜ್ಯೋತಿಷ್ಯ ರತ್ನ ಮೋಹನ್ ಮಾಯಿಪ್ಪಾಡಿ , ಜೈ ತುಲುನಾಡ್ (ರಿ.) ಕಾಸ್ರೋಡ್ ಘಟಕದ ಕಾರ್ಯದರ್ಶಿ ಜಗನ್ನಾಥ ಕಂಡತ್ತೋಡಿ, ಖಜಾಂಜಿ ಉತ್ತಮ ಯು ಮತ್ತಿತರರು ಉಪಸ್ಥಿತರಿದ್ದರು.
ಕೊಡ್ಯಮೆ ಅಂತಲ ಶ್ರೀಮೊಗೇರ ಚಾವಡಿ ಪ್ರತಿಷ್ಠಾ ಮಹೋತ್ಸವ ಸಮಿತಿ ಪ್ರದಾನ ಸಂಚಾಲಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಸ್ವಾಗತಿಸಿ, ಮಾಧ್ಯಮ ಸಮಿತಿ ಸಂಚಾಲಕ ಜಯ ಮಣಿಯಂಪಾರೆ ವಂದಿಸಿದರು. ಕಾರ್ಯಕ್ರಮವನ್ನು ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಸುಂದರ ಕಟ್ನಡ್ಕ ನಿರೂಪಿಸಿದರು.