ತಿರುವನಂತಪುರಂ: ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಕಚೇರಿಗೆ ಹಾಜರಾಗುವ ಸಮಯದಲ್ಲಿ ಎಷ್ಟು ಹಣ ಮತ್ತು ಬೆಲೆಬಾಳುವ ವಸ್ತುಗಳು ಜೊತೆಯಲ್ಲಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕ ಆಡಳಿತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ ದೈನಂದಿನ ನಗದು ಘೋಷಣೆ ರಿಜಿಸ್ಟರ್ ಅಥವಾ ವೈಯಕ್ತಿಕ ನಗದು ಘೋಷಣೆ ರಿಜಿಸ್ಟರ್ನಲ್ಲಿ ದಾಖಲಿಸಬೇಕಾಗುವುದು.
ಅಧಿಕಾರಿಗಳು ಇದನ್ನು ಮಾಡುವುದನ್ನು ಎಲ್ಲಾ ಇಲಾಖೆ ಮುಖ್ಯಸ್ಥರು ಖಚಿತಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ಮಿಂಚಿನ ತಪಾಸಣೆ ವೇಳೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಈ ರಿಜಿಸ್ಟರ್ ಗಳನ್ನು ಇಡದೇ ಇರುವುದು ಪತ್ತೆಯಾಗಿದೆ. ಬಳಿಕ ಸುತ್ತೋಲೆ ಹೊರಡಿಸಲಾಗಿದೆ.
ದತ್ತಾಂಶ ಬ್ಯಾಂಕ್‍ನಲ್ಲಿ ಸೇರಿಸಿದ ಭೂಮಿಯನ್ನು ಹಸ್ತಾಂತರಿಸುವಲ್ಲಿ ಅವ್ಯವಹಾರ ನಡೆದಿದೆ ಎಂಬ ಗೌಪ್ಯ ಮಾಹಿತಿ ಬಂದ ಹಿನ್ನಲೆಯಲ್ಲಿ ಮೊನ್ನೆ ರಾಜ್ಯದ ಕಂದಾಯ ವಿಭಾಗೀಯ ಕಚೇರಿಗಳಲ್ಲಿ ವಿಜಿಲೆನ್ಸ್ ದಾಳಿ ನಡೆಸಲಾಗಿತ್ತು.