ಕೊಚ್ಚಿ: ಪ್ರಕ್ಷುಬ್ಧ ಸಾಗರ ವಿದ್ಯಮಾನದ ಹಿನ್ನೆಲೆಯಲ್ಲಿ ಕೇರಳದ ಕರಾವಳಿಯಲ್ಲಿ ಮೇ 15ರ ರಾತ್ರಿ 11.30 ರವರೆಗೆ 0.5 ರಿಂದ 1.2 ಮೀಟರ್ ಎತ್ತರದ ಅಲೆಗಳು ಬೀಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಮುದ್ರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ (ಐಎನ್‍ಸಿಓಐಎಸ್) ಮಾಹಿತಿ ನೀಡಿದೆ. ಈ ಸಂದರ್ಭ ಅತ್ಯಂತ ವೇಗದಿಂದ ಕೂಡಿದ ಅಲೆಯು ಅಪ್ಪಳಿಸುವ ಸಾಧ್ಯತೆಇದ್ದು, ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಎಚ್ಚರಿಕೆ ಪಾಲಿಸುವಂತೆ ಸೂಚಿಸಲಾಗಿದೆ.
ಸಮುದ್ರದ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆಯಿರುವುದರಿಂದ, ಅಧಿಕಾರಿಗಳ ಸೂಚನೆಯಂತೆ ಕರಾವಳಿ ಜನತೆ ಹಾಗೂ ಮೀನುಗಾರರು ಅಪಾಯದ ಪ್ರದೇಶಗಳಿಂದ ದೂರವಿರಬೇಕು, ಮೀನುಗಾರಿಕಾ ದೋಣಿ, ಮೀನುಗಾರಿಕಾ ಪರಿಕರಗಳನ್ನು ಸುರಕ್ಷಿತವಾಗಿ ಬಂದರಿನಲ್ಲಿ ಇರಿಸಬೇಕು, ದೋಣಿಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಘರ್ಷಣೆಯ ಅಪಾಯವನ್ನು ತಪ್ಪಿಸಿಕೊಳ್ಳಬೇಕು ಹಾಗೂ ಕರಾವಳಿ ಪ್ರದೇಶಗಳಿಗೆ ಹಮ್ಮಿಕೊಮಡಿರುವ ಪ್ರವಾಸ ಮತ್ತು ಸಮುದ್ರದಲ್ಲಿನ ಇತರ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹೊರತುಪಡಿಸುವಂತೆಯೂ ಐಎನ್‍ಸಿಓಐಎಸ್ ಜಾಗ್ರತಾ ನಿರ್ದೇಶ ನೀಡಿದೆ.