ದುಬೈ: ಎರಡು ವಾರಗಳ ಬಿಡುವಿನ ನಂತರ ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ಗುರುವಾರ ಮತ್ತೆ ಭಾರಿ ಮಳೆಯಾಗಿದ್ದು, ದೇಶದಾದ್ಯಂತ ಶಾಲೆಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿದೆ.
ದುಬೈ: ಎರಡು ವಾರಗಳ ಬಿಡುವಿನ ನಂತರ ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ಗುರುವಾರ ಮತ್ತೆ ಭಾರಿ ಮಳೆಯಾಗಿದ್ದು, ದೇಶದಾದ್ಯಂತ ಶಾಲೆಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿದೆ.
ಗುಡುಗು-ಮಿಂಚು ಹಾಗೂ ವೇಗವಾಗಿ ಬೀಸುತ್ತಿದ್ದ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಹಲವು ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಹವಾಮಾನ ಬದಲಾವಣೆಯೇ ಈ ಪ್ರಮಾಣದ ಮಳೆಯಾಗಲು ಕಾರಣ ಎಂದು ತಜ್ಞರು ಹೇಳಿದ್ದಾರೆ.
ದುಬೈನ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ವಿಶ್ವದ ಅತಿ ದಟ್ಟಣೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೊರಡಲಿದ್ದ 13 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಐದು ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನಷ್ಟು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಲಿದೆ ಎಂದು ಸರ್ಕಾರಿ ಒಡೆತನ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಹಾಗೂ ಅದರ ಅಂಗಸಂಸ್ಥೆ 'ಫ್ಲೈದುಬೈ', ಪ್ರಯಾಣಿಕರಿಗೆ ತಿಳಿಸಿವೆ.
ಏಪ್ರಿಲ್ 16ರಂದು ಸುರಿದ ಪ್ರಮಾಣದಲ್ಲಿ ಈಗ ಮಳೆಯಾಗಿಲ್ಲ. ಆಗ, ದಾಖಲೆಯ 25.95 ಸೆಂ.ಮೀ.ನಷ್ಟು ಮಳೆ ಬಿದ್ದು, ನಾಲ್ವರು ಮೃತಪಟ್ಟಿದ್ದರು. 2 ಸಾವಿರಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು.