ಕಾಸರಗೋಡು: ಜಿಲ್ಲಾ ವೈದ್ಯಕೀಯ ಕಛೇರಿ, ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಜಿಲ್ಲಾ ರೋಗವಾಹಕ ನಿಯಂತ್ರಣ ಘಟಕ ಜಂಟಿಯಾಗಿ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ತಚ್ಚಂಗಾಡ್ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉಪ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಕೆ.ಸಂತೋಷ್ ಉದ್ಘಾಟಿಸಿದರು. ಪೆರಿಯ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಡಿ.ಜಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಉಪ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಎನ್.ಪಿ.ಪ್ರಶಾಂತ್, ತಾಂತ್ರಿಕ ಸಹಾಯಕ ಎ.ರಾಘವನ್, ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಎಂ. ವೇಣುಗೋಪಾಲ್, ತಚ್ಚಂಗಾಡ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಈಶ್ವರನ್, ಪಿ.ಟಿ.ಎ ಅಧ್ಯಕ್ಷ ಟಿ.ವಿ.ನಾರಾಯಣನ್ ಮಾತನಾಡಿದರು. ಪೆರಿಯ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ಮೇಲ್ವಿಚಾರಕ ಎಂ.ಚಂದ್ರನ್ ಸ್ವಾಗತ ಹಾಗೂ ಅಪರ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಎಸ್. ಸಯನಾ ವಂದಿಸಿದರು.
ಪಳ್ಳಿಕ್ಕೆರೆ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಪಿ.ಸಜೀವನ್ ಪಂಚಾಯಿತಿ ಮಟ್ಟದ ರೋಗಮೂಲ ನಾಶ ಅಭಿಯಾನ ವರದಿ ಮಂಡಿಸಿದರು. ನಂತರ ಎಸ್ ಪಿಸಿ ಮತ್ತು ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ನಡೆದ ಜಾಗೃತಿ ವಿಚಾರ ಸಂಕಿರಣದಲ್ಲಿ ಜಿಲ್ಲಾ ರೋಗವಾಹಕ ನಿಯಂತ್ರಣ ಘಟಕದ ಆರೋಗ್ಯ ನಿರೀಕ್ಷಕ ಸತೀಶ್ ಕುಮಾರ್ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ತರಗತಿ ನಡೆಸಿದರು. ಎಂ. ಸುನೀಲ್ ಕುಮಾರ್ ಸಮಸ್ಯೆ ವಿಶ್ಲೇಷಣೆ ನಡೆಸಿದರು. ಸಮುದಾಯದ ಸಹಭಾಗಿತ್ವದಿಂದ ಡೆಂಗ್ಯೂ ಜ್ವರವನ್ನು ನಿಯಂತ್ರಿಸಬಹುದು ಎಂಬ ಈ ವರ್ಷದ ಡೆಂಗ್ಯೂ ದಿನಾಚರಣೆಯ ಸಂದೇಶದೊಂದಿಗೆ ಎಸ್‍ಪಿಸಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಕುಟುಂಬಶ್ರೀ ಸದಸ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ರೋಗಮೂಲ ನಿಯಂತ್ರಣ ಚಟುವಟಿಕೆಗಳನ್ನು ಆಯೋಜಿಸಿದರು. ಕಾಸರಗೋಡು ಜಿಲ್ಲಾ ರೋಗವಾಹಕ ನಿಯಂತ್ರಣ ಘಟಕದ ನೇತೃತ್ವದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳ ವಿರುದ್ಧ ಜಾಗೃತಿ ಕಾರ್ಯಕ್ರಮವೂ ನಡೆಯಿತು. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಮಾತನಾಡಿ, ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಚಟುವಟಿಕೆಗಳ ಅಂಗವಾಗಿ ಜಾಗೃತಿ ಚಟುವಟಿಕೆಗಳು ಮತ್ತು ಕ್ಷೇತ್ರ ಮಟ್ಟದ ಮೂಲ ನಾಶದ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುವುದು ಮತ್ತು ಇದಕ್ಕೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರ ಇರಬೇಕು ಎಂದರು.