ಜಕಾರ್ತ: ಇಂಡೊನೇಷ್ಯಾದ ಐಬು ಜ್ವಾಲಾಮುಖಿ ಸೋಮವಾರ ಬೆಳಿಗ್ಗೆ ಸ್ಫೋಟಗೊಂಡಿದ್ದು, ಆಗಸದಲ್ಲಿ ಹಲವಾರು ಕಿಲೋಮೀಟರ್ ದೂರದ ತನಕ ಲಾವಾರಸದಿಂದ ಉತ್ಪತ್ತಿಯಾದ ಬೂದಿ ಚಿಮ್ಮುತ್ತಿದೆ ಎಂದು ವರದಿಯಾಗಿದೆ.

ಹಲ್ಮಹೇರ ಎಂಬ ದ್ವೀಪದಲ್ಲಿರುವ ಈ ಜ್ವಾಲಾಮುಖಿ ಬೆಳಿಗ್ಗೆ 9.12ಕ್ಕೆ ಸ್ಫೋಟಗೊಂಡಿದ್ದು ಸುಮಾರು ಐದು ನಿಮಿಷಗಳ ಕಾಲ ಆಗಸದಲ್ಲಿ 5 ಕಿಮೀಗೂ ಹೆಚ್ಚು ದೂರದ ತನಕ ಲಾವಾರಸದ ಬೂದಿ ಚಿಮ್ಮಿದೆ ಎನ್ನಲಾಗಿದೆ.