ಕೊಚ್ಚಿ: ನಗರದ ಹಾಸ್ಟೆಲ್ ನ ಬಾತ್ ರೂಂನಲ್ಲಿ ಹೆರಿಗೆಯಾದ ಯುವತಿಯನ್ನು ಕೊಲ್ಲಂ ಮೂಲದವರೊಬ್ಬರು ಮದುವೆಯಾಗಲು ಸಿದ್ಧರಾಗಿರುವುದಾಗಿ ತಿಳಿದುಬಂದಿದೆ. ಕೊಲ್ಲಂ ಮೂಲದ ಮತ್ತು ಎರ್ನಾಕುಳಂನ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಅವಿವಾಹಿತ ಮಹಿಳೆಗೆ ಭಾನುವಾರ ಹಾಸ್ಟೆಲ್‍ನ ಸ್ನಾನಗೃಹದಲ್ಲಿ ಹೆರಿಗೆಯಾಗಿತ್ತು.
ಹಾಸ್ಟೆಲ್‍ನಲ್ಲಿ ಅವರೊಂದಿಗಿದ್ದವರು ಮಾಹಿತಿ ನೀಡುತ್ತಿದ್ದಂತೆ ಪೋಲೀಸರು ಆಗಮಿಸಿ ಎರ್ನಾಕುಳಂ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪೋಲೀಸರು ಎರಡೂ ಕುಟುಂಬಗಳನ್ನು ಕರೆಸಿ ಯುವತಿಯೊಂದಿಗೆ ಮಾತನಾಡಿದ್ದು, ಕೊಲ್ಲಂನ ಯುವಕನನ್ನು ಪ್ರೀತಿಸುತ್ತಿರುವುದಾಗಿ ಯುವತಿ ತಿಳಿಸಿದ್ದಳು. ಬಳಿಕ ಯುವಕ ಯುವತಿಯನ್ನು ಮದುವೆಯಾಗಲು ಸಿದ್ಧನಾಗಿದ್ದು ಮಗುವನ್ನು ರಕ್ಷಿಸಬಹುದು ಎಂದು ಒಪ್ಪಿಕೊಂಡಿದ್ದಾನೆ. ಮನೆಯವರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎನ್ನಲಾಗಿದೆ.
ಈ ಯುವತಿ ಹಾಸ್ಟೆಲ್ ಕೋಣೆಯಲ್ಲಿ ಆರು ಜನರೊಂದಿಗೆ ವಾಸಿಸುತ್ತಿದ್ದಳು. ಆದರೆ ಆಕೆ ಗರ್ಭಿಣಿ ಎಂಬುದು ಯಾರಿಗೂ ತಿಳಿದಿರಲಿಲ್ಲ. ಯುವತಿ ದೈಹಿಕ ಅಸ್ವಸ್ಥತೆಯನ್ನು ಗಮನಿಸಿದಾಗ, ಯುವತಿ ತನಗೆ ಬೇರೆ ಯಾವುದೋ ಆರೋಗ್ಯ ಸಮಸ್ಯೆ ಇದೆ ಎಂದು ತನ್ನ ಸಹಚರರಿಗೆ ಮನವರಿಕೆ ಮಾಡುತ್ತಿದ್ದಳು. ಭಾನುವಾರ ಬೆಳಗ್ಗೆ ಬಾತ್ ರೂಮ್ ಗೆ ನುಗ್ಗಿ ಬಹಳ ಹೊತ್ತಾದರೂ ಹೊರಗೆ ಬಾರದೆ ಇದ್ದು, ಉಳಿದವರು ಬಲವಂತವಾಗಿ ಬಾಗಿಲು ತೆರೆದು ನೋಡಿದಾಗ ಆಕೆ ಮಗುವಿನೊಂದಿಗೆ ನಿಂತಿದ್ದಳು.
ಕೊಚ್ಚಿ ನಗರದ ಫ್ಲಾಟ್‍ನ ಆರನೇ ಮಹಡಿಯಿಂದ ಮಹಿಳೆಯೊಬ್ಬರು ನವಜಾತ ಶಿಶುವನ್ನು ಎಸೆದು ಕೊಂದ ಘಟನೆಯ ನಂತರ, ಈ ಯುವತಿ ಸ್ನಾನಗೃಹದಲ್ಲಿ ಹೆರಿಗೆಯಾದ ಮತ್ತೊಂದು ಘಟನೆ ಭಾರೀ ಸುದ್ದಿಯಾಗಿತ್ತು. ಆದರೆ ಈ ನಿಟ್ಟಿನಲ್ಲಿ ಪೋಲೀಸರ ಸಮಯೋಚಿತ ಮಧ್ಯಸ್ಥಿಕೆ ಸಮಸ್ಯೆಯ ಸಕಾರಾತ್ಮಕ ಫಲಿತಾಂಶಕ್ಕೆ ಕಾರಣವಾಯಿತು.