ಕಾಸರಗೋಡು: ಶಾಲಾ ಪ್ರಾರಂಭೋತ್ಸವದ ಪೂರ್ವಭಾವಿಯಾಗಿ ಕಾಸರಗೋಡು ಸ್ಟೂಡೆಂಟ್ ಪೊಲಿಸ್ ಕ್ಯಾಡೆಟ್(ಎಸ್‍ಪಿಸಿ) ಕಛೇರಿಯ ನೇತೃತ್ವದಲ್ಲಿ ಪೆÇಲೀಸ್ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹ್ಮದ್ ಕಾರ್ಯಾಗಾರ ಉದ್ಘಾಟಿಸಿದರು. ಪ್ರಭಾರ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ವಿ.ದಿನೇಶ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಮುಖ್ಯ ಭಾಷಣ ಮಾಡಿದರು.
ಡಾನ್ ಬಾಸ್ಕೋ ಡ್ರೀಮ್ ಕಾಸರಗೋಡು ನಿರ್ದೇಶಕ ಸನ್ನಿ ಥಾಮಸ್, ಕಾಸರಗೋಡು ಡಿವೈಎಸ್ಪಿ ಹರಿಪ್ರಸಾದ್, ಫೆಡರಲ್ ಬ್ಯಾಂಕ್ ಕಾಸರಗೋಡು ಶಾಖೆಯ ಮುಖ್ಯಸ್ಥ ಅಲೆಕ್ಸ್ ಅಬ್ರಹಾಂ, ಎ.ಪಿ.ಸುರೇಶ್, ಇರಿಯಣ್ಣಿ ಸರ್ಕಾರಿ ಹೈಯರ್ ಸೆಕೆಂಡರಿ ಮುಖ್ಯೋಪಾಧ್ಯಾಯ ಎ.ಎಂ.ಅಬ್ದುಲ್ ಸಲಾಂ, ಎಸ್.ಪಿ.ಸಿ ಕೋರ್ ಕಮಿಟಿ ಸದಸ್ಯ ಸಿ.ಗೋಪಿಕೃಷ್ಣನ್ , ಬೇಕಲ ಎಎಸ್‍ಐ ಶೈಲಜಾ ಉಪಸ್ಥಿತರಿದ್ದರು.
ಎಸ್‍ಪಿಸಿ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿ ಟಿ. ತಂಬಾನ್ ಯೋಜನೆಯ ಚಟುವಟಿಕೆಗಳನ್ನು ವಿವರಿಸಿದರು. ಸಹಾಯಕ ಪ್ರಾಧ್ಯಾಪಕ ಜುಬೇರ್ ತರಗತಿ ನಡೆಸಿದರು. ಕಾಸರಗೋಡು ನಾರ್ಕೋಟಿಕ್ ಸೆಲ್ ಡಿವೈಎಸ್‍ಪಿ ಹಾಗೂ ಎಸ್‍ಪಿಸಿ ಜಿಲ್ಲಾ ನೋಡಲ್ ಅಧಿಕಾರಿ ಕೆ.ಸಿ.ಸುಭಾಷ್ ಬಾಬು ಸ್ವಾಗತಿಸಿದರು. ಡಾನ್ ಬಾಸ್ಕೋ ಡ್ರೀಮ್ ಜಿಲ್ಲಾ ಸಂಯೋಜಕ ಅಜಿ ಥಾಮಸ್ ಅಡಿಯಾಯಿಪಳ್ಳಿ ವಂದಿಸಿದರು. ಕಾರ್ಯಾಗಾರದಲ್ಲಿ ಎಸ್‍ಪಿಸಿ ಶಾಲೆಯ ಮುಖ್ಯ ಶಿಕ್ಷಕರು, ಸಮುದಾಯ ಪೆÇಲೀಸ್ ಅಧಿಕಾರಿಗಳು ಮತ್ತು ಪೆÇಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.