ಕಾಸರಗೋಡು: ವಿದ್ಯಾನಗರ ಠಾಣೆ ಪೊಲೀಸರು ಮಾಯಿಪ್ಪಾಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಂತಾರಾಜ್ಯ ವಾಹನ ಕಳವು ಜಾಲದ ಇಬ್ಬರನ್ನು ಬಂಧಿಸಿದ್ದಾರೆ.
ಮಂಗಳೂರಿನ ಗುಡ್ಡೆಕಣ್ಣೂರಿನ ಬಳ್ಳುರು ನಿವಾಸಿ ಮಹಮ್ಮದ್ ಅಲ್‍ಫಾಸ್ ಹಾಗೂ ಮಂಗಳೂರು ಮಂಜಿಮೊಗರು ಮಂಜೋಟಿ ನಿವಾಸಿ ಮುಸಾಬಿಲ್ ಹುಸೈನ್ ಬಂಧಿತರು.
ವಿದ್ಯಾನಗರ ಠಾಣೆ ಇನ್ಸ್‍ಪೆಕ್ಟರ್ ಬಿನೋಯ್ ಕೆ.ಜಿ ನೇತೃತ್ವದ ಪೊಲೀಸರ ತಂಡ ಕಾಯಚರಣೆ ನಡೆಸಿದೆ. ಇವರುಕಳವುಗೈದು ಸಆಗಿಸುತ್ತಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ. 2023ಡಿ. 18ರಂದು ಎಡನೀರು ಪಾಡಿ ಕೋರಿಕ್ಕಾರು ನಿವಾಸಿ ಮಹಾಶಿರ್ ಎಂಬವರ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವುಗೈದಿರುವ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದರು. ಈ ಮಧ್ಯೆ ವಾಹನ ತಪಾಸಣೆಯಲ್ಲಿ ನಿರತರಾಗಿರುವ ಮಧ್ಯೆ ಆಗಮಿಸಿದ ಬೈಕ್ ತಪಾಸಣೆ ನಡೆಸಿದಾಗ ಇದು ಕಳವುಗೈದಿರುವುದೆಂದು ಪತ್ತೆಯಾಗಿತ್ತು. ಕಳವುಗೈದ ಬೈಕನ್ನು ನಂಬರ್‍ಪ್ಲೇಟ್ ಬದಲಾಯಿಸಿ ಮಾರಾಟ ನಡೆಸುವುದು ತಂಡದ ಉದ್ದೇಶವಾಗಿದೆ. ಮಂಗಳೂರಿನ ಶಕೀಲ್ ಎಂಬಾತ ಬೈಕ್ ಕಳವುಗೈದು ತಮಗೆ ನೀಡಿದ್ದು, ಇದನ್ನು ಮಾರಾಟ ನಡೆಸುವ ನಿಟ್ಟಿನಲ್ಲಿ ಮಾಯಿಪ್ಪಾಡಿಗೆ ತಂದಿರುವುದಾಘಿ ಆರೋಪಿಗಳು ತಿಳಿಸಿದ್ದಾರೆ.