ಸಪ್ತಗ್ರಾಮ (PTI): ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದರೂ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿಲ್ಲ ಏಕೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಸಪ್ತಗ್ರಾಮ (PTI): ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದರೂ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿಲ್ಲ ಏಕೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದ ಸಪ್ತಗ್ರಾಮದಲ್ಲಿ ಟಿಎಂಸಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಮಮತಾ, ಬೋಸ್ ಅವರು ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿಯುವವರೆಗೂ ರಾಜಭವನಕ್ಕೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ರಾಜ್ಯಪಾಲರು 'ದೀದಿಗಿರಿಯನ್ನು ಸಹಿಸಿಕೊಳ್ಳುವುದಿಲ್ಲ' ಎಂಬುದಾಗಿ ನನ್ನ ಕುರಿತು ಹೇಳಿದ್ದಾರೆ. ಆದರೆ, 'ರಾಜ್ಯಪಾಲರೇ, ನಿಮ್ಮ ದಾದಾಗಿರಿ ಇನ್ನು ಮುಂದೆ ನಡೆಯುವುದಿಲ್ಲ' ಎಂಬುದನ್ನು ನಾನು ಅವರಿಗೆ ಹೇಳಬಯಸುತ್ತೇನೆ ಎಂದಿದ್ದಾರೆ.
ರಾಜಭವನದ ಸಿ.ಸಿ.ಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕರಿಗೆ ತೋರಿಸಿದ ವಿಚಾರವಾಗಿ ಮಾತನಾಡಿ, 'ರಾಜ್ಯಪಾಲರು ಮಾರ್ಪಾಡು ಮಾಡಿದ ವಿಡಿಯೊವನ್ನು ಜನರಿಗೆ ತೋರಿಸಿದ್ದಾರೆ. ನನಗೆ ಮೂಲ ವಿಡಿಯೊ ಸಿಕ್ಕಿದ್ದು, ಸಂಪೂರ್ಣ ವಿಡಿಯೊ ವೀಕ್ಷಿಸಿದ ಬಳಿಕ ನಾನು ಆಘಾತಕ್ಕೊಳಗಾಗಿದ್ದೇನೆ. ನಿಮ್ಮ(ರಾಜ್ಯಪಾಲರ) ನಡವಳಿಕೆ ನಾಚಿಕೆಗೇಡು' ಎಂದು ಮಮತಾ ಟೀಕಿಸಿದ್ದಾರೆ.