ತೈಪೆ : ಚೀನಾದ ಮೂರು ಮಿಲಿಟರಿ ವಿಮಾನಗಳು ಮತ್ತು ಆರು ಯುದ್ಧನೌಕೆಗಳು ತನ್ನ ವಾಯುಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ ಪತ್ತೆ ಮಾಡಿದೆ.
ತೈಪೆ : ಚೀನಾದ ಮೂರು ಮಿಲಿಟರಿ ವಿಮಾನಗಳು ಮತ್ತು ಆರು ಯುದ್ಧನೌಕೆಗಳು ತನ್ನ ವಾಯುಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ ಪತ್ತೆ ಮಾಡಿದೆ.
ವಾಯು ರಕ್ಷಣಾ ಗಡಿಯ ವಲಯದಲ್ಲಿ (ಎಡಿಐಜೆಡ್) ಎರಡು ಚೀನಿ ವಿಮಾನಗಳು ಹಾರಾಟ ನಡೆಸಿವೆ ಎಂದೂ ತೈವಾನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.
ತೈವಾನ್‌ನ ರಕ್ಷಣಾ ಸಚಿವಾಲಯದ ಪ್ರಕಾರ, ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಮೂರು ಪಿಎಲ್‌ಎ ವಿಮಾನಗಳು ಮತ್ತು ಆರು ಹಡಗುಗಳು ಕಾರ್ಯಾಚರಣೆ ನಡೆಸಿವೆ. ಎರಡು ವಿಮಾನಗಳು ತೈವಾನ್‌ನ ನೈಋತ್ಯ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ ಎಂದು ಹೇಳಲಾಗಿದೆ.
ಚೀನಾದ ಏಳು ಮಿಲಿಟರಿ ವಿಮಾನಗಳು ಮತ್ತು ಐದು ಯುದ್ಧನೌಕೆಗಳು ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ಗಂಟೆವರೆಗೆ ತೈವಾನ್ ಸುತ್ತ ಕಾರ್ಯಾಚರಣೆ ನಡೆಸಿದ್ದವು.
ಚೀನಾದ ಆಕ್ರಮಣಕಾರಿ ವರ್ತನೆಯನ್ನ ತೈವಾನ್‌ನ ಸಶಸ್ತ್ರ ಪಡೆಗಳು ಮೇಲ್ವಿಚಾರಣೆ ನಡೆಸಿವೆ. ಬಳಿಕ, ಯುದ್ಧ ಗಸ್ತು ವಿಮಾನಗಳು, ಹಡಗುಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ ಎಂದು ತೈವಾನ್ ಹೇಳಿದೆ.
ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ 6 ಗಂಟೆಯವರೆಗೂ ಚೀನಾದ 9 ವಿಮಾನಗಳು ಮತ್ತು ಐದು ಹಡಗುಗಳು ತೈವಾನ್ ಸುತ್ತ ಕಾರ್ಯಾಚರಣೆಯಲ್ಲಿ ತೊಡಗಿದದ್ದೂ ಕಂಡುಬಂದಿತ್ತು.