ಕಾಸರಗೋಡು : ಅಣಂಗೂರಿನ ಭಾರತಾಂಬಾ ಸೇವಾ ಪ್ರತಿಷ್ಠಾನದÀ 7ನೇ ವಾರ್ಷಿಕ ಮಹಾಸಭೆಯು ಅಣಂಗೂರು ದೇವಣ್ಣ ಭಟ್ ಸಭಾಭವನದಲ್ಲಿ ಈಚೆಗೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಎ ಜಯಂತ ಕುಮಾರ್ ವಹಿಸಿದ್ದರು.
ಪ್ರತಿಷ್ಠಾನದ ಕಾರ್ರದರ್ಶಿ ಕೆ ರಾಜಾನಂದ ಅವರು ವರದಿ ಮಂಡಿಸಿದರು. ಪ್ರತಿಷ್ಠಾನದ ಖಜಾಂಜಿ ಕೆ ಸುನಿಲ್ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಪ್ರತಿಷ್ಠಾನದ ವತಿಯಿಂದ ಕಳೆದ ಒಂದು ವರ್ಷದ ಸೇವಾ ಕಾರ್ಯಗಳನ್ನು ಸಭೆಯಲ್ಲಿ ಅವಲೋಕನ ಮಾಡಲಾಯಿತು. ಪ್ರರಿಷ್ಠಾನದ ಸದಸ್ಯ ಕೆ ವಿಜಿತ್ ಸ್ವಾಗತಿಸಿದರು. ಪ್ರತಿಷ್ಠಾನದ ಜತೆ ಕಾರ್ಯದರ್ಶಿ ಕೆ ದಯಾನಂದ ಭಟ್ ವಂದಿಸಿದರು.