HEALTH TIPS

ಇನ್‍ಸ್ಟಾಗ್ರಾಮ್ ಮೂಲಕ ಪರಿಚಯಗೊಂಡ ಬಾಲಕಿಗೆ ಬ್ಲ್ಯಾಕ್‍ಮೇಲ್, ಬೆದರಿಕೆ-ಯುವಕಗೆ ಕೇಸು

              ಕಾಸರಗೋಡು: ಇನ್‍ಸ್ಟಾಗ್ರಾಮ್ ಮೂಲಕ ಪರಿಚಯಗೊಂಡಿದ್ದ 16ರ ಹರೆಯದ ಬಾಲಕಿಯಿಂದ ಆಕೆಯ ನಗ್ನ ಫೋಟೋ ಪಡೆದುಕೊಂಡು, ನಂತರ ಬ್ಲ್ಯಾಕ್‍ಮೇಲ್ ನಡೆಸಿ, ಆಕೆಗೆ ಬೆದರಿಕೆಯೊಡ್ಡಿದ ಕಾಸರಗೋಡು ನಿವಾಸಿ ಕೈಲಾಸ್ ಎಂಬಾತನ ವಿರುದ್ಧ ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

             ಈತನ ವಿರುದ್ಧ ಪೋಕ್ಸೋ, ಐಟಿ ಆ್ಯಕ್ಟ್ ಸೇರಿದಂತೆ ವಿವಿಧ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ. ಇನ್‍ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಯುವಕ, ನಂತರ ತನ್ನಿಂದ ನಗ್ನ ಫೋಟೋ ಪಡೆದುಕೊಂಡು, ಈ ಮೂಲಕ ತನ್ನನ್ನು ಬ್ಲ್ಯಾಕ್‍ಮೇಲ್ ನಡೆಸುತ್ತಾ ಬಂದಿದ್ದಾನೆ. ನಂತರ ತನಗೆ ಬೆದರಿಕೆಯೊಡ್ಡಿರುವುದಾಗಿಯೂ ಬಾಲಕಿ ನೀಡಿದ ದೂರಿನಲ್ಲಿ  ತಿಳಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries