HEALTH TIPS

ಡಾ.ರಮಾನಂದ ಬನಾರಿ ಕನ್ನಡದ ಆಸ್ತಿ-ಎಡನೀರಿನಲ್ಲಿ ಕೃತಿಗಳ ಅನಾವರಣ ಮತ್ತು ಸಂವಾದಗೋಷ್ಠಿಯಲ್ಲಿ ಎಡನೀರು ಶ್ರೀ


                   ಕಾಸರಗೋಡು: ತಾಳಮದ್ದಳೆ ಕ್ಷೇತ್ರಕ್ಕೆ ಡಾ.ರಮಾನಂದ ಬನಾರಿಯವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ವ್ಯಕ್ತಿತ್ವ, ಸಾಧನೆ  ಪುಸ್ತಕರೂಪದಲ್ಲಿ ಹೊರಬರುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದು ಎಡನೀರು  ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹೇಳಿದರು.

              ಅವರು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ  ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ದೇಲಂಪಾಡಿ ಇವರ ಸಂಯುಕ್ತಾಶ್ರಯದಲ್ಲಿ   ಎಡನೀರು ಮಠದ ಭಾರತೀ ಸದನದಲ್ಲಿ ಡಾ.ರಮಾನಂದ ಬನಾರಿ ಮತ್ತು ಗಣರಾಜ ಕುಂಬ್ಳೆ ರಚಿಸಿರುವ 'ತಾಳಮದ್ದಳೆ ಒಂದು ಐತಿಹಾಸಿಕ ಅಧ್ಯಯನ'ಮತ್ತುಪ್ರೊ. ಪಿ.ಎನ್ ಮೂಡಿತ್ತಾಯ ಅವರು ಸಂಪಾದಿಸಿದ'ಚಿಕಿತ್ಸಕ ದೃಷ್ಟಿಯ ಸಂಸ್ಕøತಿಯ ಸೂತ್ರಧಾರಿ ಡಾ.ರಮಾನಂದ ಬನಾರಿ' ಎಂಬ ಕೃತಿಗಳನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿದರು. ಖ್ಯಾತ ಸಂಶೋಧಕ ಡಾ.  ಕಬ್ಬಿನಾಲೆ ವಸಂತ ಭಾರಧ್ವಾಜ ಮೈಸೂರು ಅಧ್ಯಕ್ಷತೆ ವಹಿಸಿದ್ದರು. ತುಮಕೂರು ವಿ.ವಿಯ ಪ್ರಾಧ್ಯಾಪಕ

                ಡಾ.ಸಿಬಂತಿ ಪದ್ಮನಾಭ, ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೊಸಂಗಡಿ ಕೃತಿಪರಿಚಯ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್, ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ .ಚಂದ್ರಶೇಖರ ದಾಮ್ಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ.ರಮಾನಂದ ಬನಾರಿ,ಗಣರಾಜ ಕುಂಬ್ಳೆ ಉಪಸ್ಥಿತರಿದ್ದರು.  ಕೃತಿಗಳ ಲೇಖಕರಾದ ಡಾ.ವಸಂತ ಕುಮಾರ ಪೆರ್ಲ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ.ಪ್ರಮೀಳ ಮಾಧವ, ಟಿ ಎ.ಎನ್ ಖಂಡಿಗೆ,ಗಣರಾಜ ಕುಂಬ್ಳೆ, ವೆಂಕಟರಾಮ ಭಟ್ ಸುಳ್ಯ,ಇವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

              ಕೃತಿ ಬಿಡುಗಡೆ ಸಮಾರಂಭದ ಅಂಗವಾಗಿ ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲಿನೀಕರಣ'ಎಂಬ ವಿಷಯದಲ್ಲಿ ಸಂವಾದಗೋಷ್ಠಿ ನಡೆಯಿತು. ಮಾಧ್ಯಮ ತಜ್ಞ  ಭಾಸ್ಕರ ರೈ ಕುಕ್ಕುವಳ್ಳಿ  ಉದ್ಘಾಟಿಸಿದರು. ಡಾ.ರಮಾನಂದ ಬನಾರಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ದೇಶಕ ಡಾ.ವಸಂತ ಕುಮಾರ ಪೆರ್ಲ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ. ಸಾಹಿತಿ, ಉಪನ್ಯಾಸಕ ಟಿ. ಎ.ಎನ್ ಖಂಡಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು.

          ಕಾರ್ಯಕ್ರಮದಂಗವಾಗಿ ಡಾ.ರಮಾನಂದ ಬನಾರಿಯವರ ಕಾವ್ಯಗಳ ವಾಚನ ಮತ್ತು ಗಾಯನ ನಡೆಯಿತು. ಸಿ.ಎಚ್ ಗೋಪಾಲಭಟ್ಟ ಚುಕ್ಕಿನಡ್ಕ, ರಾಧಾಕೃಷ್ಣ ಕೆ.ಉಳಿಯತ್ತಡ್ಕ,ಪ್ರಮೀಳ ಚುಳ್ಳಿಕಾನ, ವೆಂಕಟ್ ಭಟ್ ಎಡನೀರು, ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ, ವಸಂತ ಬಾರಡ್ಕ ಕಾವ್ಯಗಳ ವಾಚನ, ಗಾಯನ ನಡೆಸಿದರು. ಶ್ರೀಕೃಷ್ಣಯ್ಯ ಅನಂತಪುರ,ನಾರಾಯಣ ದೇಲಂಪಾಡಿ,ಕಿಶೋರ ಬನಾರಿ ಉಪಸ್ಥಿತರಿದ್ದರು

                    ಅಹಲ್ಯ ಬನಾರಿ, ಪೃಥ್ವೀ ಬನಾರಿ ಪ್ರಾರ್ಥನೆ ಹಾಡಿದರು. ವಿಜಯಲಕ್ಷ್ಮೀ ಶಾನುಭೋಗ್ ಸ್ವಾಗತಿಸಿದರು. ದಿವ್ಯಾಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು.ವಿಶಾಲಾಕ್ಷ ಪುತ್ರಕಳ ಧನ್ಯವಾದ ಸಮರ್ಪಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries