ನಮ್ಮಲ್ಲಿ ಹೆಚ್ಚಿನವರು ಸ್ವಲ್ಪ ಕೆಮ್ಮಿದರೂ ತಕ್ಷಣ ಪೋನ್ ತೆಗೆದು ಇಂಟರ್ನೆಟ್‍ನಲ್ಲಿ ಕಾರಣವನ್ನು ಹುಡುಕುದು ಹೊಸ ಸಮಾಜದ ಹೊಸ ಅಭ್ಯಾಸಗಳಲ್ಲೊಂದು.
ಸಣ್ಣದೊಂದು ರೋಗಲಕ್ಷಣಕ್ಕಾಗಿ ಅಂತರ್ಜಾಲದಲ್ಲಿ ಹುಡುಕಾಟದ ನಂತರ ನಿಮಗೆ ಮಾರಣಾಂತಿಕ ಕಾಯಿಲೆ ಇದೆ ಎಂಬ ಉತ್ತರವನ್ನು ಗೂಗಲ್ ನೀಡುತ್ತದೆ. ಇದರಿಂದ ಇಂಥವರು ವಿಪರೀತ ಹೆದರಿ ಅಂತರ್ಜಾಲದಲ್ಲಿ ಸಿಗುವ ಔಷಧಗಳನ್ನು ಪ್ರಯೋಗಿಸಿ ಇಲ್ಲದ ಖಾಯಿಲೆಗಳನ್ನು ತಂದುಕೊಳ್ಳುತ್ತಾರೆ. ವೈದ್ಯರನ್ನು ನಂಬದೆ ಇಂಟರ್ ನೆಟ್ ಅವಲಂಬಿತವಾದರೆ ಇದೂ ಕೂಡ ಒಂದು ರೀತಿಯ ಕಾಯಿಲೆ ಎನ್ನುತ್ತಾರೆ ತಜ್ಞರು.
ಇದು ಇಂಟರ್ನೆಟ್ ಪಡೆದ ಮಾಹಿತಿ ಅಸ್ಪಷ್ಟ ಚಿಕಿತ್ಸೆ ಎಂದು ಕರೆಯಲ್ಪಡುವ ರೋಗವಾಗಿದೆ. ತಜ್ಞರು ಈ ರೋಗವನ್ನು ಶಾರ್ಟ್, 'ಈಡಿಯಟ್' ಸಿಂಡ್ರೋಮ್ ಎಂದು ಕರೆಯುತ್ತಾರೆ. ಈಡಿಯಟ್ ಸಿಂಡ್ರೋಮ್ ಎನ್ನುವುದು ವೈದ್ಯರ ಸಹಾಯವಿಲ್ಲದೆ ಅಂತರ್ಜಾಲದ ಸಹಾಯದಿಂದ ಔಷಧಿಗಳು ಮತ್ತು ರೋಗಗಳ ಬಗ್ಗೆ ತಿಳಿದುಕೊಳ್ಳುವ ಪ್ರಚೋದನೆಯಾಗಿದೆ. ಈ ಸ್ಥಿತಿಯನ್ನು ಸೈಬರ್‍ಕಾಂಡ್ರಿಯಾ ಎಂದೂ ಕರೆಯುತ್ತಾರೆ.
ನಾವು ಇಂಟರ್ನೆಟ್‍ನಿಂದ ಅಗತ್ಯವಿರುವ ಮತ್ತು ಅನಗತ್ಯವಾದ ಅನೇಕ ವಿಷಯಗಳನ್ನು ಸ್ವೀಕರಿಸುತ್ತೇವೆ. ಆದರೆ ಸ್ವ-ಚಿಕಿತ್ಸೆಯ ರೀತಿಯಲ್ಲಿ ರೋಗಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯ. ಈ ರೀತಿ ಮಾಡುವುದರಿಂದ ಅಂತಹವರಲ್ಲಿ ಅತಿಯಾದ ಆತಂಕ ಮತ್ತು ಒತ್ತಡ ಉಂಟಾಗುತ್ತದೆ ಮತ್ತು ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಅಂತರ್ಜಾಲವನ್ನು ಆಶ್ರಯಿಸದೆ ರೋಗಗಳನ್ನು ಗುರುತಿಸಲು ವೈದ್ಯಕೀಯ ಸಹಾಯವನ್ನು ಪಡೆಯುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.