ತಿರುವನಂತಪುರಂ: ತಾಯಿಯನ್ನು ಮನೆಯೊಳಗೆ ಕೂಡಿಹಾಕಿ ಬೀಗ ಜಡಿದು ಬಳಿಕ ಪುತ್ರನೋರ್ವ ಮನೆಗೆ ಬೆಂಕಿ ಹಚ್ಚಿದ್ದಾನೆ. ವೆಂಜರಮೂಡ್ ಮಣಿಕಲ್ ಪಂಚಾಯತ್ ಪ್ಲಾಕ್ಕಿಜ್ ಎಂಬಲ್ಲಿಯ ಬಿನು (42) ಅಲಿಯಾಸ್ ಚೆಂಬನ್ ಬಿನು ಮನೆಗೆ ಬೆಂಕಿ ಹಚ್ಚಿದ್ದಾನೆ.ಸ್ಥಳೀಯರು ಬಂದು ಬೆಂಕಿ ನಂದಿಸಿದ ಕಾರಣ ಅನಾಹುತ ತಪ್ಪಿದೆ.
ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಮನೆಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ತಾಯಿ ಮನೆಯೊಳಗಿದ್ದರು. ಒಂದೇ ಅಂತಸ್ತಿನ ಮನೆಯ ಹೆಂಚು, ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ತಾಯಿ ಹಿಂಬದಿಯಿಂದ ಹೊರಬಂದು ಓಡಿ ತಪ್ಪಿಸಿಕೊಂಡರು. ಬಿನುವಿನ ಕಿರುಕುಳ ಸಾಮಾನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು. ಬಿನು ಅವರು ಆ ಪ್ರದೇಶದಲ್ಲಿನ ಮನೆಗಳ ಬಲ್ಬ್ ಮತ್ತು ಕಿಟಕಿಗಳನ್ನು ಒಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಿನು ಮದ್ಯವ್ಯಸನಿ ಎಂದು ಪೋಲೀಸರು ತಿಳಿಸಿದ್ದಾರೆ. ಮನೆಗೆ ಹೆಚ್ಚಿನ ಹಾನಿಯಾಗಿಲ್ಲ. ಮಗನನ್ನು ಮಾದಕ ವ್ಯಸನ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಆರೋಪಿ ಬಿನು ಮಾನಸಿಕ ಅಸ್ವಸ್ಥನೆಂದು ಶಂಕಿಸಲಾಗಿದೆ. ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ.