ನವದೆಹಲಿ: ಲೋಕಸಭಾ ಚುನಾವಣೆಯ ಮತದಾನದ ಅಂಕಿ ಅಂಶವನ್ನು ಮತಗಟ್ಟೆವಾರು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಈ ಕಾರ್ಯಕ್ಕಾಗಿ ಸಿಬ್ಬಂದಿ ನೇಮಕ ಮಾಡುವುದು ಚುನಾವಣಾ ಆಯೋಗಕ್ಕೆ ದುಸ್ತರವಾಗಲಿದೆ. ಐದು ಹಂತಗಳ ಮತದಾನ ಈಗಾಗಲೇ ನಡೆದಿದ್ದು, ಇನ್ನು ಎರಡು ಹಂತಗಳ ಮತದಾನ ಬಾಕಿ ಇರುವುದದರಿಂದ ಆ ರೀತಿಯ ನಿರ್ದೇಶನ ನೀಡಲು ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ರಜಾ ಕಾಲದ ವಿಭಾಗೀಯ ಪೀಠ ಹೇಳಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸಾಮಾನ್ಯ ಕಲಾಪದ ಅವಧಿಗೆ ಮುಂದೂಡಿದೆ.
ಮತದಾನ ನಡೆದು 48 ಗಂಟೆಗಳೊಳಗಾಗಿ ಮತಗಟ್ಟೆವಾರು ಫಾರ್ಮ್ 17ಸಿ ಅಂಕಿ ಅಂಶವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ದೇಶನ ನೀಡುವಂತೆ ಕೋರಿ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆ ಆದೇಶ ನೀಡಿದೆ.
ಮೇ 17ರಂದು ಎಡಿಆರ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಕುರಿತಂತೆ ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಎಲ್ಲ ಮತಗಟ್ಟೆಗಳ ಮತದಾನದ ನಂತರ ಕೂಡಲೇ ಫಾರ್ಮ್ 17ಸಿ(ಮತದಾನದ ದಾಖಲು) ಪ್ರತಿಗಳ ಸ್ಕ್ಯಾನ್ ಕಾಪಿಯನ್ನು ಅಪ್‌ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಎಡಿಆರ್ ಮಧ್ಯಂತರ ಅರ್ಜಿ ಸಲ್ಲಿಸಿತ್ತು.