HEALTH TIPS

ಉತ್ತಮ ಸಂಸ್ಕಾರವನ್ನು ಪಡೆದ ಮಗುವಿನ ಭವಿಷ್ಯ ಉಜ್ವಲವಾಗಲಿದೆ: ಪೆರಡಾಲದಲ್ಲಿ ವಸಂತ ವೇದಪಾಠ ಶಿಬಿರ ಸಮಾರೋಪ

           ಬದಿಯಡ್ಕ: ಉತ್ತಮ ವಿಚಾರ, ಚಿಂತನೆಗಳನ್ನು ಮನದಲ್ಲಿ ಅಳವಡಿಸಿಕೊಂಡು ಶ್ರಮದ ಜೀವನ, ಅಧ್ಯಯನದಿಂದ ನಾವು ಸಾಧಕರಾಗಲು ಸಾಧ್ಯವಿದೆ. ಮಗುವಿಗೆ ಸರಿಯಾದ ಸಂಸ್ಕಾರವನ್ನು ನೀಡಿದಾಗ ಆ ಮಗುವಿನ ಭವಿಷ್ಯ ಉಜ್ವಲವಾಗಿ ಬೆಳಗುತ್ತದೆ ಎಂದು ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು.

             ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ಇದರ ಆಶ್ರಯದಲ್ಲಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ವಸಂತವೇದಪಾಠ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.


            ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ ಇರುವಷ್ಟು ಭಾಷೆಗಳು ಪ್ರಪಂಚದಲ್ಲಿ ಇಲ್ಲ. ಭಾಷೆ ಎಂಬುದನ್ನು ಕಂಡುಹಿಡಿದವರು ಶ್ರೇಷ್ಠರು. 6000 ಕ್ಕಿಂತಲೂ ಹೆಚ್ಚು ಭಾಷೆಗಳಿದ್ದ ಕಾಲವೊಂದಿತ್ತು ಎಂಬ ಉಲ್ಲೇಖವಿದೆ. ಸಂಸ್ಕøತವು ದೇವಭಾಷೆಯಾಗಿದೆ. ವೇದಾಧ್ಯಯನದಿಂದ ನಮ್ಮ ಬುದ್ಧಿಯು ವಿಕಾಸವನ್ನು ಹೊಂದುತ್ತದೆ ಎಂದರು. 

             ಹಿರಿಯರಾದ ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ 60 ವರ್ಷಗಳಿಂದ ನಡೆದುಬರುತ್ತಿರುವ ವೇದ ಶಿಬಿರವು ನಿರಂತರವಾಗಿ ನಡೆಯಬೇಕು. ಇಲ್ಲಿನ ವೇದಪಾಠ ಶಾಲೆಯು ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದೆ. ನಮ್ಮೊಳಗಿನ ನಕಾರಾತ್ಮಕ ಚಿಂತನೆಗಳನ್ನು ದೂರವಿಟ್ಟು ಸಕಾರಾತ್ಮ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹವು ಭವಿಷ್ಯಕ್ಕೆ ಉತ್ತಮವಾಗಲಿದೆ ಎಂದರು. ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಕೋಶಾಧಿಕಾರಿ ವೈ.ಕೆ.ಗೋವಿಂದ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಾಠಶಾಲಾ ಗುರುಗಳಾದ ಮಹಾಗಣಪತಿ ಅಳಕ್ಕೆ ವರದಿ ಮಂಡಿಸಿದರು. ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ಸ್ವಾಗತಿಸಿ, ಪಾಠಶಾಲಾ ಗುರುಗಳಾದ ಮುರಳೀಧರ ಅಳಕ್ಕೆ ವಂದಿಸಿದರು. 3 ತರಗತಿಗಳಲ್ಲಾಗಿ ವೇದವಿದ್ಯೆಯನ್ನು ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪಾಠಶಾಲಾ ಗುರುಗಳಾದ ಸುಬ್ರಹ್ಮಣ್ಯ ಪ್ರಸಾದ ನೀರ್ಚಾಲು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries