ಬದಿಯಡ್ಕ: ಶ್ರೀಮದ್ ಎಡನೀರು ಮಠದ ಭಾರತೀಸದನ ಸಭಾಂಗಣದಲ್ಲಿ ಇಂದು(ಭಾನುವಾರ)ಅಪರಾಹ್ನ 2 ರಿಂದ ಕಾಸರಗೋಡು ಜಿಲ್ಲಾ ಲೇಖಕರ ಸಂಘ ಹಾಗೂ ಬನಾರಿ ಶ್ರೀಗೋಪಾಲಕೃಷ್ಣ ಕಲಾಸಂಘ ದೇಲಂಪಾಡಿ ಇದರ ನೇತೃತ್ವದಲ್ಲಿ ಡಾ.ರಮಾನಂದ ಬನಾರಿ ಅವರ ಕೃತಿಗಳ ಅನಾವರಣ ಸಮಾರಂಭ ನಡೆಯಲಿದೆ.
ಅಪರಾಹ್ನ 2 ರಿಂದ ಡಾ.ರಮಾನಂದ ಬನಾರಿಯವರ ಕಾವ್ಯ ವಾಚನ ಮತ್ತು ಗಾಯನ ನಡೆಯಲಿದೆ. 2.30 ರಿಂದ ಕವಿಗಳು ಮತ್ತು ಗಾಯಕರಿಂದ ಸಂವಾದ ಗೋಷ್ಠಿ ನಡೆಯಲಿದ್ದು, ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕøತಿಕ ವಿಲೀನೀಕರಣ ವಿಷಯದ ಸಂವಾದದಲ್ಲಿ ಪ್ರೊ.್ರ.ಭಾಸ್ಕರ ರೈ ಕುಕ್ಕುವಳ್ಳಿ ನಿರ್ವಹಿಸುವರು. ಡಾ. ರಮಾನಂದ ಬನಾರಿ, ಡಾ. ವಸಂತ ಕುಮಾರ ಪೆರ್ಲ, ಟಿ.ಎ.ಎನ್. ಖಂಡಿಗೆ, ಡಾ .ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿರುವರು. 3.30ರಿಂದ ಕೃತಿಗಳ ಲೋಕಾರ್ಪಣೆ ನಡೆಯಲಿದ್ದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕೃತಿಗಳ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡುವರು. ಡಾ. ಕಬ್ಬಿನಾಲೆ ವಸಂತಭಾರದ್ವಾಜ ಅಧ್ಯಕ್ಷತೆ ವಹಿಸುವರು. ಡಾ. ಸಿಬಂತಿ ಪದ್ಮನಾಭ ಅವರು ಡಾ.ಬನಾರಿಯವರು ಬರೆದ ಕೃತಿ ‘ತಾಳಮದ್ದಳೆ ಒಂದು ಐತಿಹಾಸಿಕ ಅಧ್ಯಯನ’ ಕೃತಿಯ ಬಗ್ಗೆ ಪರಿಚಯ ನೀಡುವರು. ಪ್ರೊ.ಪಿ.ಎನ್.ಮೂಡಿತ್ತಾಯ ಸಂಪಾದಿಸಿರುವ ಇನ್ನೊಂದು ಕೃತಿ ‘ಚಿಕಿತ್ಸಕ ದೃಷ್ಟಿಯ ಸಂಸ್ಕøತಿಯ ಸೂತ್ರಧಾರಿ ಡಾ.ರಮಾನಂದ ಬನಾರಿ’ ಕೃತಿಯನ್ನು ಡಾ.ಬಾಲಕೃಷ್ಣ ಹೊಸಂಗಡಿ ಪರಿಚಯ ನೀಡುವರು. ಈ ಕೃತಿಯಲಲಿ ಡಾ.ಎಂ.ಪ್ರಭಾಕರ ಜೋಶಿ, ಡಾ.ಪ್ರಮೀಳಾ ಮಾಧವ, ಡಾ.ವಸಂತಕುಮಾರ್ ಪೆರ್ಲ, ಡಾ.ಮುರಳೀಮೋಹನ ಚೂಂತಾರು, ವೆಂಕಟರಮಣ ಭಟ್ ಸುಳ್ಯ, ಟಿ.ಎ.ಎನ್.ಖಂಡಿಗೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಡಾ.ಬನಾರಿಯವರ ಕುರಿತು ವಿವಿಧ ಆಯಾಮಗಳಲ್ಲಿ ವಿಮರ್ಶಿಸಿದ್ದಾರೆ.
ಸಮಾರಂಭದಲ್ಲಿ ಡಾ. ಎಂ.ಪಿ. ಶ್ರೀನಾಥ, ಡಾ.ಚಂದ್ರಶೇಖರ ದಾಮ್ಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿಶಾಲಾಕ್ಷ ಪುತ್ರಕಳ, ದಿವ್ಯಾ ಗಟ್ಟಿ ಪರಕ್ಕಿಲ, ವೆಂಕಟ ಭಟ್ ಎಡನೀರು, ನಾರಾಯಣ ದೇಲಂಪಾಡಿ ನೇತೃತ್ವ ವಹಿಸುವರು.